ದಿಗಂಬರೇಶ್ವರ  ರಥೋತ್ಸವದ ವೇಳೆ ಮಕ್ಕಳ ಎಸೆತ; ಸುವರ್ಣ ನ್ಯೂಸ್ ವರದಿ ಬಳಿಕ ಎಚ್ಚೆತ್ತ ಆಡಳಿತ

First Published 3, Apr 2018, 6:01 PM IST
Suvarna News Impact
Highlights

ದಿಗಂಬರೇಶ್ವರ  ರಥೋತ್ಸವದ ವೇಳೆ ಮಕ್ಕಳನ್ನು ತೇರಿನ ಮೇಲಿಂದ ಎಸೆದ ಪ್ರಕರಣದಲ್ಲಿ  ಸುವರ್ಣ ನ್ಯೂಸ್ ವರದಿಗೆ  ವಿಜಯಪುರ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಸ್ಪಂದಿಸಿದ್ದಾರೆ. 

ವಿಜಯಪುರ (ಏ. 03):  ದಿಗಂಬರೇಶ್ವರ  ರಥೋತ್ಸವದ ವೇಳೆ ಮಕ್ಕಳನ್ನು ತೇರಿನ ಮೇಲಿಂದ ಎಸೆದ ಪ್ರಕರಣದಲ್ಲಿ  ಸುವರ್ಣ ನ್ಯೂಸ್ ವರದಿಗೆ  ವಿಜಯಪುರ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಸ್ಪಂದಿಸಿದ್ದಾರೆ. 

ಸುವರ್ಣ ನ್ಯೂಸ್  ವರದಿ ನೋಡಿ ಅಧಿಕಾರಿಗಳು ಮಠಕ್ಕೆ ಭೇಟಿ ನೀಡಿ, ತಿಳುವಳಿಕೆ ಪತ್ರ ನೀಡಿದ್ದಾರೆ.  ದಿಗಂಬರೇಶ್ವರ ಜಾತ್ರಾ ಸಮೀತಿಗೆ ನೊಟೀಸ್ ಜಾರಿ ಮಾಡಿದ್ದಾರೆ. 

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಕೋಲ್ಹಾರದಲ್ಲಿ  ಏಪ್ರೀಲ್ 1ರಂದು  ದಿಗಂಬರೇಶ್ವರ ಜಾತ್ರೆಯ ವೇಳೆ ಮಕ್ಕಳನ್ನು  ಮೇಲಿಂದ ಎಸೆದಿರುವ ಕುರಿತು ಸುವರ್ಣ ನ್ಯೂಸ್ ವರದಿ ಬಿತ್ತರಿಸಿತ್ತು.  ವರದಿ ಬಿತ್ತರವಾಗುತ್ತಿದ್ದಂತೆ   ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿನ ಮುಖ್ಯಸ್ಥರಿಗೆ ನೊಟೀಸ್ ಜಾರಿಗೊಳಿಸಲಾಗಿದೆ.  

ರಥೋತ್ಸವದ ವೇಳೆ ಮೇಲಿಂದ ಮಕ್ಕಳನ್ನು ಎಸೆಯುವ ಮೂಲಕ ಮಕ್ಕಳ ಹಕ್ಕು ಉಲ್ಲಂಘನೆ ಮಾಡಿದ ಆರೋಪದ ಮೇಲೆ ಕ್ರಮ ಮುಗ್ದ ಮಕ್ಕಳ ಮಾನಸಿಕ ಮತ್ತು ಭಾವನಾತ್ಮಕ ಬೆಳೆವಣಿಗೆಯ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.  

loader