ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗ್ರಾಮವೊಂದರಲ್ಲಿ ರಸ್ತೆ, ಬಸ್​​ ಸೌಲಭ್ಯ ಇಲ್ಲದೇ ಹೆತ್ತ ತಾಯಿಯನ್ನು ನೀರಿನ ತಳ್ಳುಗಾಡಿಯಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಅಮಾನವೀಯ ಘಟನೆ  ಬಗ್ಗೆ ಸುವರ್ಣ ನ್ಯೂಸ್ ವರದಿ ಪ್ರಸಾರಮಾಡುತ್ತಿದ್ದಂತೆಯೇ ಅಧಿಕಾರಿಗಳು ಎಚ್ಚೆತ್ತಿದ್ದಾರೆ.ಕುಷ್ಟಗಿ ತಹಶೀಲ್ದಾರ್, ತಾಲೂಕು ಆರೋಗ್ಯ ಅಧಿಕಾರಿಗಳ ತಂಡ ಜುಂಜಲಕೊಪ್ಪ  ಗ್ರಾಮಕ್ಕೆ ಭೇಟಿ ನೀಡಿದೆ. ಅಧಿಕಾರಿಗಳು, ಶೀಘ್ರವೇ ರಸ್ತೆ ನಿರ್ಮಿಸಿ, ಸಾರಿಗೆ ಸಂಪರ್ಕ ಕಲ್ಪಿಸುವ ಭರವಸೆ ನೀಡಿದೆ.ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಜುಂಜಲಕೊಪ್ಪ ಗ್ರಾಮದ ವ್ಯಕ್ತಿಯೊಬ್ಬ  ಕಳೆದ 1 ವರ್ಷದಿಂದ ಪ್ರತಿ ವಾರ ತನ್ನ ತಾಯಿಯನ್ನು 2 ಕಿ.ಮೀ ದೂರ ಇರುವ ಚಳಗೇರಿ ಆಸ್ಪತ್ರೆಗೆ ನೀರಿನ ಗಾಡಿಯಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾರೆ.