Asianet Suvarna News Asianet Suvarna News

ಸುವರ್ಣನ್ಯೂಸ್ ಮೆಗಾ Exclusive: ಯೋಗೀಶ್ ಗೌಡ ಹತ್ಯೆಯಲ್ಲಿ ಸಚಿವ ವಿನಯ್ ಕುಲಕರ್ಣಿ ಕೈವಾಡ?

ಇದು ಇಡೀ ರಾಜ್ಯವೇ ಬೆಚ್ಚಿಬೀಳುವ ಮರ್ಡರ್ ಮಿಸ್ಟರಿ! ರಾಜ್ಯದ ಪ್ರಭಾವಿ ಸಚಿವರೊಬ್ಬರ ಬಣ್ಣವನ್ನು ಸುವರ್ಣ ನ್ಯೂಸ್ ಬಯಲು ಮಾಡಿದೆ.

Suvarna News Expose a Big Exclusive News

ಬೆಂಗಳೂರು (ನ.23): ಇದು ಇಡೀ ರಾಜ್ಯವೇ ಬೆಚ್ಚಿಬೀಳುವ ಮರ್ಡರ್ ಮಿಸ್ಟರಿ! ರಾಜ್ಯದ ಪ್ರಭಾವಿ ಸಚಿವರೊಬ್ಬರ ಬಣ್ಣವನ್ನು ಸುವರ್ಣ ನ್ಯೂಸ್ ಬಯಲು ಮಾಡಿದೆ.

ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಮೆಗಾಟ್ವಿಸ್ಟ್ ಸಿಕ್ಕಿದೆ. ಜೂನ್ 15, 2016ರಂದು ಹಾಡಹಗಲೇ  ಕಾರಿನಲ್ಲಿ ಬಂದ 6 ಮಂದಿ ಅಪರಿಚಿತರು ಯೋಗೀಶ್​ ಗೌಡರನ್ನು  ಹತ್ಯೆಗೈದಿದ್ದರು. ಈ ಹತ್ಯೆಯಲ್ಲಿ ಸಚಿವ ವಿನಯ್ ಕುಲಕರ್ಣಿ ಕೈವಾಡ ಇದೆ ಎಂಬ ಬಲವಾದ ಆರೋಪ ಕೇಳಿ ಬರುತ್ತಿದೆ. ಯೋಗೀಶ್ ಗೌಡ ಕುಟುಂಬದ ಜೊತೆ ರಾಜೀ ಸಂಧಾನಕ್ಕೆ ಸಚಿವ ವಿನಯ್ ಕುಲಕರ್ಣಿ ಯತ್ನಿಸಿದರಾ? ಎಂಬ ಸಂಶಯ ದಟ್ಟವಾಗಿದೆ. ಈ ಎಲ್ಲದರ ಬಗ್ಗೆ ಸುವರ್ಣ ನ್ಯೂಸ್ ಬಳಿಯಿದೆ E ವಿಡಿಯೋ ಮತ್ತು ಆಡಿಯೋ ಸಾಕ್ಷ್ಯಗಳು.

ಕೊಲೆ ಪ್ರಕರಣದ ಸತ್ಯ ಹೇಳೋದಿಕ್ಕೆ ಸುವರ್ಣ ನ್ಯೂಸ್​ ಸ್ಟುಡಿಯೋಗೆ ಬಂದಿದ್ದಾರೆ ಯೋಗೀಶ್ ಗೌಡ ಕುಟುಂಬಸ್ಥರು.  ಯೋಗೀಶ್ ಗೌಡ ಕೊಲೆಯಾಗಿದ್ದು ಏಕೆ ? ಕೊಲೆ ಹಿಂದಿನ ರಹಸ್ಯ ಏನು ? ಯೋಗೀಶ್​ ಗೌಡಗೂ- ಸಚಿವ ವಿನಯ್​ ಕುಲಕರ್ಣಿಗೂ ಇರೋ ದ್ವೇಷ ಏನು? ಸಚಿವ ವಿನಯ್​ ಕುಲಕರ್ಣಿ ರಾಜಿ ಸಂಧಾನಕ್ಕೆ ಮುಂದಾಗಿದ್ದು ಏಕೆ ? ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಸ್ಫೋಟಕ ಸತ್ಯಗಳನ್ನು ಬಹಿರಂಗಪಡಿಸಲಿದ್ದಾರೆ ಯೋಗೀಶ್ ಗೌಡ ಕುಟುಂಬಸ್ಥರು.

ಈ ವಿಚಾರವನ್ನು ಸುವರ್ಣ ನ್ಯೂಸ್ ಪ್ರಸಾರ ಮಾಡುತ್ತಿದ್ದಂತೆ ಅತ್ತ ಬೆಳಗಾವಿಯಲ್ಲಿ ಕಲಾಪ ಆರಂಭವಾದ ಕೂಡಲೇ ಸಚಿವ ವಿಶ್ವೇಶ್ವರ ಹೆಗಡೆ ಕಾವೇರಿ ಇದನ್ನು ಪ್ರಸ್ತಾಪಿಸಿದರು. ಈ ಬಗ್ಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು.  ಸಚಿವ ಜಾರ್ಜ್ ಪ್ರಕರಣದಲ್ಲೂ ಸರ್ಕಾರ ಸರಿಯಾದ ಉತ್ತರ ನೀಡುತ್ತಿಲ್ಲ.  ವಿನಯ್ ಕುಲಕರ್ಣಿ ಪ್ರಕರಣದ ಬಗ್ಗೆ ಸ್ಪಷ್ಟೀಕರಣ ನೀಡಬೇಕು.  ಹಲವು ಕೊಲೆ ಪ್ರಕರಣಗಳನ್ನು ಮುಚ್ಚಿಹಾಕಲು ಸರ್ಕಾರ ಯತ್ನಿಸುತ್ತಿದೆ.  ಈ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ವಿಶ್ವೇಶ್ವರ ಹೆಗಡೆ ಆಗ್ರಹಿಸಿದ್ದಾರೆ.

ಇನ್ನೂ ವಿಧಾನ ಪರಿಷತ್'ನಲ್ಲೂ ಕೂಡಾ ಈ ವಿಚಾರ ಪ್ರತಿಧ್ವನಿಸಿತು.

Latest Videos
Follow Us:
Download App:
  • android
  • ios