Asianet Suvarna News Asianet Suvarna News

ಬೆಂಗಳೂರು ಟ್ಯಾಂಕರ್ ವಾಟರ್ ಸೀಕ್ರೆಟ್ ! ಕುಡಿದ್ರೆ ಹರೋಹರ

ಹೌದು…..ಈ ಎಚ್ಚರಿಕೆಯನ್ನ ಅತ್ಯಂತ ತುರ್ತಾಗಿ ನಿಮಗೆ ನೀಡಬೇಕಾಗಿದೆ. ಯಾಕಂದರೆ ರಾಜಧಾನಿ ಬೆಂಗಳೂರಲ್ಲಿ ಟ್ಯಾಂಕರ್ ನೀರು ಹೆಸರಲ್ಲಿ ಚರಂಡಿ ನೀರು ಕುಡಿಸುತ್ತಿದ್ದಾರೆ ಮಾಫಿಯಾ ಮಂದಿ. ಇದರಿಂದ ಜನರಿಗೆ ಬರಬಾರದ ಕಾಯಿಲೆ ಬರುತ್ತಿದೆ.

Suvarna News Cover story expose Tanker water mafia
  • Facebook
  • Twitter
  • Whatsapp

ಬರದ ಬೇಗೆಯಲ್ಲಿ ಜನ ಕುಡಿಯೋ ನೀರಿಗೆ ಪರದಾಡಿದ್ರೆ ಅವರಿಗೆ ಕೊಳಚೆ ಚರಂಡಿ ನೀರು ಕುಡಿಸುತ್ತಿದೆ ಟ್ಯಾಂಕರ್ ಮಾಫಿಯಾ. ಈ ಶಾಕಿಂಗ್ ಸತ್ಯವನ್ನ  ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಪತ್ತೆ ಹಚ್ಚಿದೆ. ಅ ಸತ್ಯದ ಸಂಕ್ಷಿಪ್ತ ದರ್ಶನ ಇಲ್ಲದೆ ನೋಡಿ.

ಟ್ಯಾಂಕರ್ ನೀರು ಕುಡಿತ್ತಿದ್ದೀರಾ? ಹಾಗಾದ್ರೆ ..ಎಚ್ಚರ …..ಎಚ್ಚರ! ನೀರು ಪ್ರಾಣಕ್ಕೆ ಕುತ್ತಾಗಬಹುದು

ಹೌದು…..ಈ ಎಚ್ಚರಿಕೆಯನ್ನ ಅತ್ಯಂತ ತುರ್ತಾಗಿ ನಿಮಗೆ ನೀಡಬೇಕಾಗಿದೆ. ಯಾಕಂದರೆ ರಾಜಧಾನಿ ಬೆಂಗಳೂರಲ್ಲಿ ಟ್ಯಾಂಕರ್ ನೀರು ಹೆಸರಲ್ಲಿ ಚರಂಡಿ ನೀರು ಕುಡಿಸುತ್ತಿದ್ದಾರೆ ಮಾಫಿಯಾ ಮಂದಿ. ಇದರಿಂದ ಜನರಿಗೆ ಬರಬಾರದ ಕಾಯಿಲೆ ಬರುತ್ತಿದೆ.

ಅತ್ಯಂತ ಅಪಾಯಕಾರಿ ರಾಸಾಯನಿಕ ತ್ಯಾಜ್ಯ ತುಂಬಿದ ಕೆರೆ, ತೊರೆ, ದೊಡ್ಡ ಮೋರಿ ಪಕ್ಕದಲ್ಲೇ ಬೋರ್ ಕೊರೆದು ಆ ನೀರನ್ನ ಅಪಾರ್ಟ್'ಮೆಂಟ್, ಹೊಟೇಲ್, ಪಿ.ಜಿ ಸೇರಿದಂತೆ ಹೆಚ್ಚಿನವರಿಗೆ ಕುಡಿಯಲು ಸರಬರಾಜು ಮಾಡುತ್ತಿದ್ದಾರೆ. ಇದು ಕವರ್ ಸ್ಟೋರಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

ಈ ವಿಷಪೂರಿತ ಕೆರೆಯಂಚಿನಲ್ಲಿ ಬೋರ್ ಕೊರೆದು ಸರಬರಾಜು ಮಾಡಿದ ನೀರು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಅಂತಾರೆ ಪರಿಸರ ತಜ್ಞರು. ಈ ಕೊಳಕು ನೀರಿನ ಟ್ಯಾಂಕರ್ ಮಾಫಿಯಾ, ಚರಂಡಿ ನೀರಿಗೂ ಟ್ಯಾಂಕರ್'ಗೆ  500ರಿಂದ 2000ಸಾವಿರ ರೂಪಾಯಿವರೆಗೆ ಚಾರ್ಚ್ ಮಾಡುತ್ತೆ. ಇಂಥಾ ಕೊಳಕು ದಂಧೆಯನ್ನು ಕಾರ್ಪೋರೇಟರ್'ಗಳು, ಎಂಎಲ್ಎಗಳು ಅವರ ಸಂಬಂಧಿಕರು, ಸ್ನೇಹಿತರೇ ಅಕ್ರಮವಾಗಿ ನಡೆಸುತ್ತಿರುವುದರಿಂದ

ಇದರ ತಂಟೆಗೆ ಯಾರೂ ಹೋಗುತ್ತಿಲ್ಲ. ಇದು ಈ ನಾಡಿನ ದುರಂತ ಅಲ್ಲದೆ ಮತ್ತಿನ್ನೇನು ಹೇಳಿ.

ವರದಿ: ರಂಜಿತ್ ಹಾಗೂ ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್

(ಸಾಂದರ್ಭಿಕ ಚಿತ್ರ)

Follow Us:
Download App:
  • android
  • ios