ಗ್ರಾಮದ ರೈತ ಕರಿಯಪ್ಪ ಎಂಬುವರಿಗೆ ಸೇರಿದ ರಾಸುಗಳು ಸಂಜೆ ಕೆರೆಯಲ್ಲಿ ನೀರು ಕುಡಿದು ಬರುತ್ತಿದ್ದಂತೆ ನಿಗೂಢವಾಗಿ ಸಾವನ್ನಪ್ಪಿವೆ.

ಮಂಡ್ಯ (ಜ.14): ಸಂಕ್ರಾತಿ ದಿನವೇ ನಾಲ್ಕು ರಾಸುಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕಿನ ಮಾದನಾಯ್ಕನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ರೈತ ಕರಿಯಪ್ಪ ಎಂಬುವರಿಗೆ ಸೇರಿದ ರಾಸುಗಳು ಸಂಜೆ ಕೆರೆಯಲ್ಲಿ ನೀರು ಕುಡಿದು ಬರುತ್ತಿದ್ದಂತೆ ನಿಗೂಢವಾಗಿ ಸಾವನ್ನಪ್ಪಿವೆ.

ಸುಮಾರು ಎರಡು ಲಕ್ಷ ರೂ ಮೌಲ್ಯದ ರಾಸುಗಳ ಸಾವಿನಿಂದ ಕರಿಯಪ್ಪ ಕಂಗಾಲಾಗಿದ್ದಾರೆ ಹಾಗೂ ಪರಿಹಾರಕ್ಕಾಗಿ ಅಹವಾಲು ತೋಡಿಕೊಂಡಿದ್ದಾರೆ.