ಶಿವಮೊಗ್ಗ (ಸೆ.16): ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಸಮೀಪದ ಅಂಬಾರಗೊಪ್ಪ ಸರ್ಕಾರಿ ವಸತಿ ಶಾಲೆಯ 15 ವರ್ಷದ ವಿದ್ಯಾರ್ಥಿನಿ ಕಾವ್ಯ ಕಾಲು ಜಾರಿ ಬಿದ್ದು ಸಾವಿಗೀಡಾಗಿರುವ ಪ್ರಕರಣದ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಸೊರಬ ತಾಲ್ಲೂಕಿನ ಶಕುನವಳ್ಳಿ ಗ್ರಾಮದ ಕಾವ್ಯ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದಳು. ಗುರುವಾರ ಬೆಳಗ್ಗೆ ಮೆಟ್ಟಿಲುಗಳ ಮೇಲಿನಿಂದ ಕಾಲು ಜಾರಿ ಬಿದ್ದು ಸಾವನಪ್ಪಿದ್ದಾಳೆ ಎಂದು ಹೇಳಲಾಗುತ್ತಿದೆ.
ಆದರೆ ಪೋಷಕರು ನನ್ನ ಮಗಳು ಜಾರಿ ಬಿದ್ದಿಲ್ಲ. ಯಾರೋ ತಳ್ಳಿರಬೇಕು, ಇಲ್ಲವೇ ಹತ್ಯೆ ಮಾಡಿರಬೇಕು ಅಂತ ಆರೋಪಿಸುತ್ತಿದ್ದಾರೆ.
ಹಾಸ್ಟೆಲ್ ವಾರ್ಡನ್ ಮತ್ತು ಪ್ರಿನ್ಸಿಪಾಲರ ಪ್ರಕಾರ ಕಾವ್ಯ, ಗುರುವಾರ ಬೆಳಗ್ಗೆ ಪ್ರಾರ್ಥನೆಗೆ ಬಂದಿರಲಿಲ್ಲ. ಗೆಳತಿಯರು ಮೇಲೆ ಹೋಗಿ ನೋಡಿದ್ದಾಗ ಹಾಸ್ಟೆಲ್ ಹಿಂಭಾಗದಲ್ಲಿ ಬಟ್ಟೆ ಒಗೆಯುವ ಕಲ್ಲಿನ ಬಳಿ ಕಾವ್ಯ ಬಿದ್ದಿದ್ದು ಕಿವಿಯಿಂದ ರಕ್ತ ಸೋರುತ್ತಿತ್ತು ಎಂದು ಹೇಳಿದ್ದರು.
