ಅಮಾನತುಗೊಂಡಿದ್ದ ಮಲ್ಪೆ ಠಾಣೆಯ ಪೇದೆ ಪ್ರಕಾಶ್ ಮತ್ತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಸಚಿವ ಪ್ರಮೋದ್ ಮಧ್ವರಾಜ್ ಪ್ರಭಾವ ಬಳಸಿ ಈ ಅಮಾನತು ಮಾಡಿಸಿದ್ದಾರೆ ಎಂಬ ಆರೋಪಗಳು ಬಂದಿತ್ತು.ಇದಕ್ಕೆ ವಿರೋಧವೂ ವ್ಯಕ್ತವಾಗಿದ್ದು, ಮುಖ್ಯಮಂತ್ರಿಯವರ ಗಮನಕ್ಕೂ ಬಂದಿತ್ತು ಎನ್ನಲಾಗಿದೆ.

ಉಡುಪಿ (ಏ.15): ಪತ್ನಿಗೆ ಕಿರುಕುಳ ನೀಡಿದ ವ್ಯಕ್ತಿಯನ್ನು ಥಳಿಸಿದ್ದ ಉಡುಪಿಯ ಮಲ್ಪೆ ಠಾಣಾ ವ್ಯಾಪ್ತಿಯ ಪೇದೆ ಪ್ರಕಾಶ್ ಅಮಾನತು ಹಿಂಪಡೆಯಲಾಗಿದೆ.

ಪ್ರಕಾಶ್ ತಮ್ಮ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಸಂದರ್ಭದಲ್ಲಿ ಪತ್ನಿಗೆ ಕಿರುಕುಳ ನೀಡಿದ್ದ ಕುಮಾರ್ ಎಂಬಾತನಿಗೆ ಥಳಿಸಿದ್ದರು. ಆದರೆ ಕುಮಾರ್ ಸಚಿವರ ಒಡೆತನದ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಕಾರಣ, ಈ ಪ್ರಕರಣ ಬೇರೆ ಸ್ವರೂಪ ಪಡೆದುಕೊಂಡು,ಪ್ರಕಾಶ್’ರನ್ನು ಅಮಾನತು ಮಾಡಲಾಗಿತ್ತು.

ಅಮಾನತುಗೊಂಡಿದ್ದ ಮಲ್ಪೆ ಠಾಣೆಯ ಪೇದೆ ಪ್ರಕಾಶ್ ಮತ್ತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಸಚಿವ ಪ್ರಮೋದ್ ಮಧ್ವರಾಜ್ ಪ್ರಭಾವ ಬಳಸಿ ಈ ಅಮಾನತು ಮಾಡಿಸಿದ್ದಾರೆ ಎಂಬ ಆರೋಪಗಳು ಬಂದಿತ್ತು.ಇದಕ್ಕೆ ವಿರೋಧವೂ ವ್ಯಕ್ತವಾಗಿದ್ದು, ಮುಖ್ಯಮಂತ್ರಿಯವರ ಗಮನಕ್ಕೂ ಬಂದಿತ್ತು ಎನ್ನಲಾಗಿದೆ.

ಇದೀಗ ಪ್ರಕಾಶ್ ಅವರ ಅಮಾನತು ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದ್ದು ಸಚಿವರಿಗೆ ತೀವ್ರ ಮುಖಭಂಗವಾಗಿದೆ.