ಭಾರತೀಯನನ್ನು ಕೊಂದವನನ್ನು ಎನ್ ಕೌಂಟರ್ ಮಾಡಿದ ಅಮೆರಿಕಾ ಪೊಲೀಸರು

First Published 16, Jul 2018, 9:09 PM IST
Suspect in killing of Telangana student Sharath Koppu shot dead at USA
Highlights

  • ಜುಲೈ 6ರಂದು ಕನ್ಸಾಸ್‌ ನಗರದ ರೆಸ್ಟೋರೆಂಟ್‌ ಬಳಿ ಭಾರತೀಯ ವಿದ್ಯಾರ್ಥಿ ಶರತ್‌ ಕೊಪ್ಪು ಹತ್ಯೆ
  • ಎನ್‌ಕೌಂಟರ್‌ ನಡೆಸಿ ಶಂಕಿತನನ್ನು ಹತ್ಯೆ ಮಾಡಿದ ಅಮೆರಿಕಾ ಪೊಲೀಸರು

ವಾಷಿಂಗ್ಟನ್‌[ಜು.16] : ಜುಲೈ 6ರಂದು ಕನ್ಸಾಸ್‌ ನಗರದ ರೆಸ್ಟೋರೆಂಟ್‌ ಬಳಿ  ಭಾರತೀಯ ವಿದ್ಯಾರ್ಥಿ ಶರತ್‌ ಕೊಪ್ಪುನನ್ನು ಗುಂಡಿಕ್ಕಿ ಸಾಯಿಸಿದ್ದ ಶಂಕಿತ ಹಂತಕನನ್ನು ಪೊಲೀಸರು ಎನ್ಕೌಂಟರ್ ನಲ್ಲಿ ಕೊಂದಿದ್ದಾರೆ.

ಆರೋಪಿಯೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಅಮೆರಿಕ ಪೊಲೀಸರು ಎನ್‌ಕೌಂಟರ್‌ ನಡೆಸಿ ಹತ್ಯೆ ಮಾಡಿದ್ದಾರೆ. ಗುಂಡಿನ ಕಾಳಗದಲ್ಲಿ ಮೂವರು ಪೊಲೀಸರಿಗೆ ಗಾಯವಾಗಿದೆ. 

ಉನ್ನತ ವ್ಯಾಸಂಗಕ್ಕಾಗಿ ಕೆಲ ತಿಂಗಳ ಹಿಂದೆ ಅಮೆರಿಕಾಕ್ಕೆ ಬಂದಿದ್ದ ಶರತ್ ಬಿಡುವಿನ ವೆಳೆಯಲ್ಲಿ ಕನ್ಸಾಸ್‌ ನಗರದ ರೆಸ್ಟೋರೆಂಟ್‌ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ. ದರೋಡೆ ಮಾಡಲು ಜುಲೈ 6ರಂದು ರೆಸ್ಟೋರೆಂಟ್ ಗೆ ಬಂದಿದ್ದ ಶಂಕಿತ ಶರತ್ ನನ್ನು ಹತ್ಯೆ ಮಾಡಿದ್ದ. 

 

loader