ಸುಷ್ಮಾರವರಿಗೆ ವೈದ್ಯರು ಡಯಾಲಿಸಿಸ್‌ ಚಿಕಿತ್ಸೆ ಮುಂದುವರೆಸಿದ್ದು, ಅವರಿಗೆ ಕೆಲ ದಿನಗಳ ಕಾಲ ಚಿಕಿತ್ಸೆ ಮುಂದುವರಿಯಲಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಸುಷ್ಮಾ ಸ್ವರಾಜ್‌ 'ನಾನು ಮೂತ್ರಪಿಂಡ ವೈಫ‌ಲ್ಯದಿಂದ ಬಳಲುತ್ತಿದ್ದು ಏಮ್ಸ್‌ಗೆ ದಾಖಲಾಗಿದ್ದೇನೆ. ಸದ್ಯ ಡಯಾಲಿಸಿಸ್‌ ನಡೆಸಲಾಗುತ್ತಿದೆ. ಕಿಡ್ನಿ ಕಸಿ ಮಾಡುವ ಕುರಿತು ವೈದ್ಯರು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ದೇವ ಕೃಷ್ಣ ನನ್ನನ್ನು ಹರಸುತ್ತಾನೆ' ಎಂದು ಬರೆದಿದ್ದಾರೆ.
ನವದೆಹಲಿ(ನ.16): ಮೂತ್ರ ಪಿಂಡ ವೈಫಲ್ಯದಿಂದ ವಿದೇಶಾಂಗ ಇಲಾಖಾ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ತೀವ್ರ ಅನಾರೋಗ್ಯ ಕಾಣಿಸಿಕೊಂಡಿದ್ದು, ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವೈದ್ಯರು ಡಯಾಲಿಸಿಸ್ ಚಿಕಿತ್ಸೆ ಮುಂದುವರೆಸಿದ್ದು, ಅವರಿಗೆ ಕೆಲ ದಿನಗಳ ಕಾಲ ಚಿಕಿತ್ಸೆ ಮುಂದುವರಿಯಲಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುಷ್ಮಾ ಸ್ವರಾಜ್ 'ನಾನು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದು ಏಮ್ಸ್ಗೆ ದಾಖಲಾಗಿದ್ದೇನೆ. ಸದ್ಯ ಡಯಾಲಿಸಿಸ್ ನಡೆಸಲಾಗುತ್ತಿದೆ. ಕಿಡ್ನಿ ಕಸಿ ಮಾಡುವ ಕುರಿತು ವೈದ್ಯರು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ದೇವ ಕೃಷ್ಣ ನನ್ನನ್ನು ಹರಸುತ್ತಾನೆ' ಎಂದು ಬರೆದಿದ್ದಾರೆ.
ಸುಷ್ಮಾ ಸ್ವರಾಜ್ ಅವರ ಸ್ಥಿತಿ ಈಗ ಸ್ಥಿರವಾಗಿದ್ದು , ದೀರ್ಘ ಕಾಲಿಕ ಸಮಸ್ಯೆಯಾದ ಮಧುಮೇಹ ಅವರ ಮೂತ್ರ ಪಿಂಡಗಳ ಮೇಲೆ ಪರಿಣಾಮ ಬೀರಿದೆ ಎಂದು ಏಮ್ಸ್ ಮೂಲಗಳು ತಿಳಿಸಿವೆ. 64 ರ ಹರೆಯದ ಸುಷ್ಮಾ ಸ್ವರಾಜ್ ಅವರು ಕಳೆದ 20 ವರ್ಷಗಳಿಂದ ಶುಗರ್'ನಿಂದ ಬಳಲುತ್ತಿದ್ದಾರೆ.
ಕಳೆದ ಎಪ್ರಿಲ್ ತಿಂಗಳಿನಲ್ಲಿ ಏಮ್ಸ್'ಗೆ ದಾಖಲಾಗಿದ್ದ ಅವರು ಚಿಕಿತ್ಸೆಯ ಬಳಿಕ ಗುಣಮುಖರಾಗಿ ಅತ್ಯಂತ ಕ್ರೀಯಾಶೀಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
