ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನ ಸಂಪರ್ಕ ಕಡಿದುಕೊಂಡ ಆತಂಕಕಾರಿ ಘಟನೆ ನಡೆದಿದೆ. ತಿರುವನಂತಪುರಂದಿಂದ ಮಾರಿಷಸ್‌ಗೆ ಹೊರಟಿದ್ದ ವಿಶೇಷ ವಿಮಾನ ಮೇಘದೂತ, ನಿಲ್ದಾಣದ ಜೊತೆಗೆ ಸುಮಾರು 14 ನಿಮಿಷಗಳ ಕಾಲ ಸಂಪರ್ಕ ಕಳೆದುಕೊಂಡು ಆತಂಕ ಸೃಷ್ಟಿಸಿತ್ತು.
ನವದೆಹಲಿ(ಜೂ.3): ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನ ಸಂಪರ್ಕ ಕಡಿದುಕೊಂಡ ಆತಂಕಕಾರಿ ಘಟನೆ ನಡೆದಿದೆ. ತಿರುವನಂತಪುರಂದಿಂದ ಮಾರಿಷಸ್‌ಗೆ ಹೊರಟಿದ್ದ ವಿಶೇಷ ವಿಮಾನ ಮೇಘದೂತ, ನಿಲ್ದಾಣದ ಜೊತೆಗೆ ಸುಮಾರು 14 ನಿಮಿಷಗಳ ಕಾಲ ಸಂಪರ್ಕ ಕಳೆದುಕೊಂಡು ಆತಂಕ ಸೃಷ್ಟಿಸಿತ್ತು.
ಸುಷ್ಮಾ ಸ್ವರಾಜ್ ತಿರುವನಂತಪುರಂ ನಿಂದ ಮಾರಿಷಸ್ ಮಾರ್ಗವಾಗಿ ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸುತ್ತಿದ್ದರು. ಮಾರಿಷಸ್ ತಲುಪಿದ ಕೆಲವೇ ಕ್ಷಣಗಳಲ್ಲಿ ವಿಮಾನವು ಸಂಪರ್ಕ ಕಳೆದುಕೊಂಡಿತು. ಸುಮಾರು 14 ನಿಮಿಷಗಳ ಕಾಲ ವಿಮಾನ ಸಂಪರ್ಕಕ್ಕೆ ಬಾರದೆ ಆತಂಕ ಸೃಷ್ಟಿಯಾಗಿತ್ತು.
ಅಂತರಾಷ್ಟ್ರೀಯ ಏರ್ ಟ್ರಾಫಿಕ್ ಕಂಟ್ರೋಲ್ ನಿಯಮದ ಪ್ರಕಾರ ಯಾವುದೇ ವಿಮಾನವು 30 ನಿಮಿಷಗಳ ಕಾಲ ಸಂಪರ್ಕಕ್ಕೆ ಸಿಗದೇ ಹೋದರೆ ವಿಮಾನವು ಕಾಣೆಯಾಗಿದೆ ಎಂದು ಘೊಷಿಸಲಾಗುತ್ತದೆ. ಆದರೆ ಅದೃಷ್ಟವಶಾತ್ ಸುಷ್ಮಾ ಸಂಚರಿಸುತ್ತಿದ್ದ ವಿಮಾನ 14 ನಿಮಿಷಗಳ ನಂತರ ಸಂಪರ್ಕಕ್ಕೆ ದೊರೆತಿದೆ.
ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ ಕಚೇರಿ, ಸುಷ್ಮಾ ಸ್ವರಾಜ್ ಸುರಕ್ಷಿತವಾಗಿದ್ದು, ಈಗಾಗಲೇ ಮಾರಿಷಸ್‌ನಿಂದ ದಕ್ಷಿಣ ಆಫ್ರಿಕಾ ತಲುಪಿದ್ದಾರೆ ಎಂದು ಸ್ಪಷ್ಟಪಡಿಸಿದೆ.
