ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್'ನಲ್ಲಿ ಪಂಜಾಬ್'ನ ಕಾಂಗ್ರೆಸ್ ಸಂಸದ ಪರ್ತಾಪ್ ಸಿಂಗ್ ಬಾಜ್ವಾರನ್ನು ಬ್ಲಾಕ್ ಮಾಡಿದ್ದು, ಇದು ಭಾರೀ ಸುದ್ದಿಯಾಗಿದೆ.
ನವದೆಹಲಿ (ಡಿ.29): ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್'ನಲ್ಲಿ ಪಂಜಾಬ್'ನ ಕಾಂಗ್ರೆಸ್ ಸಂಸದ ಪರ್ತಾಪ್ ಸಿಂಗ್ ಬಾಜ್ವಾರನ್ನು ಬ್ಲಾಕ್ ಮಾಡಿದ್ದು, ಇದು ಭಾರೀ ಸುದ್ದಿಯಾಗಿದೆ.
ಇರಾಕ್'ನಲ್ಲಿ 39 ಮಂದಿ ಭಾರತೀಯರು ನಾಪತ್ತೆಯಾಗಿರುವುದರ ಬಗ್ಗೆ ಟ್ವಿಟರ್'ನಲ್ಲಿ ಪ್ರಶ್ನೆ ಎತ್ತಿದ ಪರ್ತಾಪ್ ಸಿಂಗ್ ಬಾಜ್ವಾರನ್ನು ಬ್ಲಾಕ್ ಮಾಡಿದ್ದಾರೆ. ಸದಾ ಟ್ವಿಟರ್'ನಲ್ಲಿ ಸಕ್ರಿಯವಾಗಿರುವ, ವಿದೇಶಾಂಗ ಇಲಾಖೆಗೆ ಸಂಬಂಧಪಟ್ಟ ಟ್ವೀಟ್'ಗಳಿಗೆ ಜನರ ಸಮಸ್ಯೆಗಳಿಗೆ ಟ್ವೀಟರ್'ನಲ್ಲೇ ಕೂಡಲೇ ಸ್ಪಂದಿಸುವ ಸುಷ್ಮಾ ಸ್ವರಾಜ್ ಪ್ರತಾಪ್ ಸಿಂಗ್'ರನ್ನು ಬ್ಲಾಕ್ ಮಾಡಿರುವುದು ಟ್ವೀಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
