ಈ ಪ್ರಕಾರ, ಒಟ್ಟು 543 ಲೋಕಸಭಾ ಕ್ಷೇತ್ರದಲ್ಲಿ ಎನ್'ಡಿಎ'ಗೆ 315, ಯುಪಿಎಗೆ 62 ಹಾಗೂ ಇತರರಿಗೆ 85 ಲಭಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ನವದೆಹಲಿ(ಜು.04): ಲೋಕಸಭೆಗೆ ಈಗ ಚುನಾವಣೆ ನಡೆದರೆ ಎನ್'ಡಿಎಗೇ ಬಹುಮತ ಬರಲಿದೆ ಎಂದು ಚುನಾವಣಾ ಸಮೀಕ್ಷಾ ಸಂಸ್ಥೆಯೊಂದು ಭವಿಷ್ಯ ನುಡಿದಿದೆ.

ವಿಡಿಪಿ ಅಸೋಸಿಯೇಟ್ಸ್ ಎಂಬ ಸಂಸ್ಥೆ 14 ದೊಡ್ಡ ರಾಜ್ಯಗಳ 82 ಕ್ಷೇತ್ರಗಳಲ್ಲಿ 12826 ಜನರನ್ನು ಸಂದರ್ಶಿಸಿ ಈ ಸಮೀಕ್ಷೆ ಸಿದ್ಧಪಡಿಸಿದೆ. ಈ ಪ್ರಕಾರ, ಒಟ್ಟು 543 ಲೋಕಸಭಾ ಕ್ಷೇತ್ರದಲ್ಲಿ ಎನ್'ಡಿಎ'ಗೆ

315, ಯುಪಿಎಗೆ 62 ಹಾಗೂ ಇತರರಿಗೆ 85 ಲಭಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಎನ್'ಡಿಎ 2014ರಲ್ಲಿ 336 ಕ್ಷೇತ್ರಗಳಲ್ಲಿ ಜಯಿಸಿತ್ತು. ಪ್ರಧಾನಿ ಅಭ್ಯರ್ಥಿಗಳಲ್ಲಿ ಯಾರು ಉತ್ತಮರು ಎಂಬ ಪ್ರಶ್ನೆಗೆ ನರೇಂದ್ರ ಮೋದಿ ಪರ ಶೇ.59 ಜನ ಒಲವು ತೋರಿದ್ದರೆ, ರಾಹುಲ್ ಗಾಂಧಿ ಪರ ಶೇ.14, ಸೋನಿಯಾ ಗಾಂಧಿ ಪರ ಶೇ.4 ಜನ ಒಲವು ಸೂಚಿಸಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ 2019ರ ಬೇಸಿಗೆಯಲ್ಲಿ ನಡೆಯಬೇಕಿದೆ.