ಗಡಿನುಸುಳುವ ಪ್ರಯತ್ನಗಳು ನಿನ್ನೆಯೂ ನಡೆದಿದ್ದು ಗಡಿ ನಿಯಂತ್ರಣ ರೇಖೆಯ ಪೂಂಚ್ ಸೆಕ್ಟರ್'ನಲ್ಲಿ ಇಬ್ಬರು ಉಗ್ರವಾದಿಗಳನ್ನು ಹೊಡೆದುರುಳಿಸಿದ್ದಾರೆ ಎಂದು ರಾವತ್ ತಿಳಿಸಿದ್ದಾರೆ.
ನವದೆಹಲಿ(ಜ.13): ಅವಶ್ಯಕತೆ ಉಂಟಾದರೆ ಭಾರತೀಯ ಸೇನೆ ಗಡಿಬಾಗದಲ್ಲಿ ಸರ್ಜಿಕಲ್ ದಾಳಿ ನಡೆಸಲಿದೆ ಎಂದು ನೂತನ ಸೇನಾ ಮುಖ್ಯಸ್ಥ ಜೆನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, 'ಇತ್ತೀಚಿನ ದಿನಗಳಲ್ಲಿ ಗಡಿರೇಖೆ ಉಲ್ಲಂಘಿಸುವವರ ಸಂಖ್ಯೆ ಕಡೆಮೆಯಾಗುತ್ತಾ ಬಂದಿದೆ. ಇದು ನಿಲ್ಲದಿದ್ದರೆ ಮತ್ತೊಮ್ಮೆ ಸರ್ಜಿಕಲ್ ದಾಳಿ ನಡೆಸಲು ಸೇನೆ ಸಿದ್ಧವಿದೆ' ಎಂದು ಪಾಕ್'ಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಗಡಿನುಸುಳುವ ಪ್ರಯತ್ನಗಳು ನಿನ್ನೆಯೂ ನಡೆದಿದ್ದು ಗಡಿ ನಿಯಂತ್ರಣ ರೇಖೆಯ ಪೂಂಚ್ ಸೆಕ್ಟರ್'ನಲ್ಲಿ ಇಬ್ಬರು ಉಗ್ರವಾದಿಗಳನ್ನು ಹೊಡೆದುರುಳಿಸಿದ್ದಾರೆ ಎಂದು ರಾವತ್ ತಿಳಿಸಿದ್ದಾರೆ.
ಸೆಪ್ಟಂಬರ್'ನಲ್ಲಿ ನಡೆಸಿದ ಸರ್ಜಿಕಲ್ ದಾಳಿಯನ್ನು ವಿಶ್ಲೇಷಿಸಿದ ರಾವತ್, ಗಡಿ ನುಸುಳುವಿಕೆಯ ಬಗ್ಗೆ ಮೃದು ಧೋರಣೆ ತಳೆದರೆ ಭಯೋತ್ಪಾದಕರಿಗೆ ಬೆಂಬಲ ನೀಡಿದಂತಾಗುತ್ತದೆ. ಸರಿಯಾದ ಸಂದೇಶ ನೀಡುವ ಸಲುವಾಗಿ ಸರ್ಜಿಕಲ್ ದಾಳಿ ನಡೆಸುವ ಮೂಲಕ ಸ್ಪಷ್ಟ ಸಂದೇಶ ನೀಡಲಾಗಿದೆ. ಅಗತ್ಯಬಿದ್ದರೆ ಮುಂದೆಯೂ ಸರ್ಜಿಕಲ್ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ರಾವತ್ ಹೇಳಿದ್ದಾರೆ.
ಇದೇ ವೇಳೆ ಆಕಸ್ಮಿಕವಾಗಿ ಗಡಿನಿಯಂತ್ರಣ ರೇಖೆ ದಾಟಿ ಪಾಕಿಸ್ತಾನದಲ್ಲಿ ಸೆರೆಯಾಗಿರುವ ಭಾರತೀಯ ಯೋಧ ಚಂದು ಚೌಹ್ಹಾನ್ ಬಿಡುಗಡೆ ಮಾಡುವುದಾಗಿ ಪಾಕ್ ಸೇನಾಧಿಕಾರಿಗಳು ತಿಳಿಸಿದ್ದಾರೆಂದು ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.
