‘ಮೀಟರ್ ಎಂಬುದು ಭೂಗತ ಜಗತ್ತಿನಲ್ಲಿ, ರೌಡಿಗಳ ಸಾಮ್ರಾಜ್ಯದಲ್ಲಿ ಪ್ರಚಲಿತವಾಗಿರುವ ಪದ. ಇದು ಓರ್ವ ಗೌರವಾನ್ವಿತ ಮುಖ್ಯಮಂತ್ರಿಗಳು ಬಳಸಬಹುದಾದ ಪದವೇ ಅಲ್ಲ. ಯಾವುದೇ ರಾಜಕೀಯ ನಾಯಕ ರೌಡಿ ಜಗತ್ತಿನ ಭಾಷೆಯ ಒತ್ತುವರಿ ಮಾಡಬಾರದು.’
ಬೆಂಗಳೂರು(ಸೆ.25): ‘ಮೀಟರ್ ಎಂಬುದು ಭೂಗತ ಜಗತ್ತಿನಲ್ಲಿ, ರೌಡಿಗಳ ಸಾಮ್ರಾಜ್ಯದಲ್ಲಿ ಪ್ರಚಲಿತವಾಗಿರುವ ಪದ. ಇದು ಓರ್ವ ಗೌರವಾನ್ವಿತ ಮುಖ್ಯಮಂತ್ರಿಗಳು ಬಳಸಬಹುದಾದ ಪದವೇ ಅಲ್ಲ. ಯಾವುದೇ ರಾಜಕೀಯ ನಾಯಕ ರೌಡಿ ಜಗತ್ತಿನ ಭಾಷೆಯ ಒತ್ತುವರಿ ಮಾಡಬಾರದು.’
ಯಡಿಯೂರಪ್ಪ ಅವರಿಗೆ ಮೀಟರ್ ಇಲ್ಲ ಎಂಬ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ವಕ್ತಾರ ಹಾಗೂ ಮಾಜಿ ಸಚಿವ ಎಸ್.ಸುರೇಶ್‌ಕುಮಾರ್ ಅವರ ತೀಕ್ಷ್ಣ ಪ್ರತಿಕ್ರಿಯೆಯಿದು.
ಈ ಸಂಬಂಧ ಭಾನುವಾರ ಸುದೀರ್ಘ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸುರೇಶ್‌ಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಕಟುವಾಗಿ ಖಂಡಿಸಿ ಯಡಿಯೂರಪ್ಪ ಅವರ ಹೋರಾಟದ ಹಾದಿಯನ್ನು ಪ್ರಸ್ತಾಪಿಸಿದ್ದಾರೆ.
ಆ ಹೇಳಿಕೆಯ ಆಯ್ದ ಭಾಗ ಹೀಗಿದೆ:
ಸಿದ್ದರಾಮಯ್ಯ ಅವರು ಮೀಟರ್ ಇಲ್ಲ ಎಂದು ಹೇಳಿರು ವುದು ರಾಜ್ಯದ ಮಾಜಿ ಸಿಎಂ ವಿರುದ್ಧ. ಅವರು ಈ ಪದವನ್ನು ಉಪಯೋಗಿಸಬಾರದಾಗಿತ್ತು. ಈಗ ಆ ಪದವನ್ನು ಎದುರಿಗಿನ ಜನರ ಚಪ್ಪಾಳೆ ಗಿಟ್ಟಿಸಲು ಹೇಳಿ ಸಣ್ಣವರಾಗಿಬಿಟ್ಟರು. ಮೀಟರ್ ಎಂಬುದು ಭೂಗತ ಜಗತ್ತಿನಲ್ಲಿ, ರೌಡಿಗಳ ಸಾಮ್ರಾಜ್ಯದಲ್ಲಿ ಪ್ರಚಲಿತವಾಗಿರುವ ಪದ. ಓರ್ವ ಗೌರವಾನ್ವಿತ ಮುಖ್ಯ ಮಂತ್ರಿಗಳು ಬಳಸಬಹುದಾದ ಪದವೇ ಅಲ್ಲ. ಸಿದ್ದರಾಮಯ್ಯನವರಿಗೆ ಅಗತ್ಯ ಪ್ರತಿಕ್ರಿಯೆ ಕೊಡ ಬೇಕಾಗಿರುವುದರಿಂದ ಆ ಬಳಸಬಾರದ ಪದವನ್ನು ಅನಿವಾರ್ಯವಾಗಿ ನಾನೂ ಬಳಸಬೇಕಿದೆ, ಕ್ಷಮಿಸಿ.
-ಯಡಿಯೂರಪ್ಪ ಅವರಿಗೆ ಮೀಟರ್ ಇಲ್ಲ ಎಂದು ನಡತೆ ಪ್ರಮಾಣ ಸರ್ಟಿಫಿಕೇಟ್ ಕೊಟ್ಟೇಬಿಟ್ಟಿರುವ ಸಿದ್ದರಾಮಯ್ಯನವರಿಗೆ ಅದು ಇದೆಯೇ? ಓರ್ವ ಮುಖ್ಯಮಂತ್ರಿಯಾಗಿ ಅವರ ಪಕ್ಷದ ಅಧ್ಯಕ್ಷಿಣಿ ಅಥವಾ ಉಪಾಧ್ಯಕ್ಷರ ಜೊತೆ ಸಲೀಸಾಗಿ ಅಪಾಯಿಂಟ್ಮೆಂಟ್ ತೆಗೆದುಕೊಳ್ಳುವಷ್ಟೂ ಮೀಟರ್ ಇದೆಯೆಂದು ಇದುವರೆಗೆ ಸಿದ್ದರಾಮಯ್ಯನವರು ಎಂದೂ ರುಜುವಾತು ಮಾಡಿಲ್ಲ. ಅದಕ್ಕಾಗಿ ಸಚಿವ ಸಂಪುಟ ವಿಸ್ತರಣೆ ಎಷ್ಟು ಕಾಲ ಮುಂದೆ ಹೋಯಿತೆಂದು ಇಡೀ ರಾಜ್ಯದ ಜನತೆಗೆ ಗೊತ್ತಿದೆ.
-ಯಡಿಯೂರಪ್ಪ ಅವರು ಇನ್ನೂ ಶಾಸಕರಾಗುವ ಮುನ್ನವೇ ಶಿಕಾರಿಪುರದಲ್ಲಿ ಜೀತದಾಳುಗಳ ಸಮಸ್ಯೆ ವಿರುದ್ಧ ಪರಿಣಾಮಕಾರಿ ಹೋರಾಟ ಕೈಗೊಂಡು, ಆಗ ಇದ್ದ ಶಾಸಕರ ಬೆಂಬಲಿಗರು ತನ್ನ ತಲೆ ಒಡೆದರೂ ಆ ಹೋರಾಟ ಕೈಬಿಡದೆ ತನಗೆ ಮೀಟರ್ ಇದೆ ಯೆಂದು ಆಗಲೇ ರುಜುವಾತು ಮಾಡಿದರು. ಇಂತಹ ಯಾವು ದಾದರೂ ಹೋರಾಟವನ್ನು ಮೀಟರ್ ಪ್ರತಿಪಾದಕ ಸಿದ್ದರಾಮ ಯ್ಯನವರು ಕೈಗೆತ್ತಿಗೊಂಡು ಯಶಸ್ವಿಯಾಗಿದ್ದಾರೆಯೇ?.
