ಗಣರಾಜ್ಯೋತ್ಸವದ ನಂತರ ಪ್ರಧಾನಿ ನರೇಂದ್ರ ಮೋದಿ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂಬ ಸುದ್ದಿಗಳು ಬಿಜೆಪಿ ವಲಯದಲ್ಲಿ ಹರಿದಾಡುತ್ತಿದ್ದು, ಮಂತ್ರಿಯಾಗಬೇಕು ಎನ್ನುವವರು ಮರಳಿ ಓಡಾಡಲು ಶುರುಮಾಡಿದ್ದಾರೆ.
ಗಣರಾಜ್ಯೋತ್ಸವದ ನಂತರ ಪ್ರಧಾನಿ ನರೇಂದ್ರ ಮೋದಿ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂಬ ಸುದ್ದಿಗಳು ಬಿಜೆಪಿ ವಲಯದಲ್ಲಿ ಹರಿದಾಡುತ್ತಿದ್ದು, ಮಂತ್ರಿಯಾಗಬೇಕು ಎನ್ನುವವರು ಮರಳಿ ಓಡಾಡಲು ಶುರುಮಾಡಿದ್ದಾರೆ.
ಕರ್ನಾಟಕದಲ್ಲಿ ಲಿಂಗಾಯತರಿಗೆ ಒಂದು ಸ್ಥಾನವನ್ನು ಚುನಾವಣೆಗಿಂತ ಮುಂಚೆ ನೀಡಬೇಕು ಎಂದು ಬೆಳಗಾವಿ ಸಂಸದ ಸುರೇಶ್ ಅಂಗಡಿ, ರಾಜ್ಯಸಭಾ ಸಂಸದ ಪ್ರಭಾಕರ ಕೋರೆ ಲಾಬಿ ಶುರು ಮಾಡಿದ್ದು, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್ ಬಳಿಗೆ ಅಲೆದಾಡಿ ಬಂದಿದ್ದಾರೆ. ಸುರೇಶ್ ಅಂಗಡಿ ಅವರಿಗೆ ಹೊಸದಾಗಿ ಬೀಗರಾಗಿರುವ ಜಗದೀಶ್ ಶೆಟ್ಟರ್ ಅವರು ಅಂಗಡಿ ಪರ ಪ್ರಯತ್ನ ಮಾಡುತ್ತಿದ್ದು, ಪ್ರಭಾಕರ ಕೋರೆ ಅರುಣ್ ಜೇಟ್ಲಿಯವರ ದೋಸ್ತಿಯನ್ನು ಬಳಸಿಕೊಂಡು ಸ್ವಲ್ಪ ಓಡಾಟ ನಡೆಸಿದ್ದಾರೆ. ಆದರೆ ಯಡಿಯೂರಪ್ಪನವರು ಸಂಪುಟ ವಿಸ್ತರಣೆ ಮಾಡುವುದಾದರೆ ಶಿವಕುಮಾರ್ ಉದಾಸಿಗೆ ಮಂತ್ರಿ ಸ್ಥಾನ ಕೊಡಿ ಎಂದು ಹೇಳಿದ್ದಾರೆ ಎಂಬ ಸುದ್ದಿಯಿದೆ. ನಿಜಕ್ಕೂ ಸಂಪುಟ ವಿಸ್ತರಣೆ ಆಗುತ್ತದೆಯೋ ಇಲ್ಲವೋ ಖಚಿತವಾಗಿ ಯಾರಿಗೂ ಗೊತ್ತಿಲ್ಲ. ಆದರೆ ರಾಜಕಾರಣಿಗಳಲ್ಲವೇ? ಸೀಟ್ ಮೇಲೆ ಟವೆಲ್ ಹಾಕಿಟ್ಟು ಬಸ್ ಬಿಡುವುದನ್ನು ಕಾಯುತ್ತಾ ಕೂರುವುದು ಅನಿವಾರ್ಯ ಕರ್ಮ.

ಇಂಡಿಯಾ ಗೇಟ್ ನ ಯ್ದ ಭಾಗಗಳು, ಪ್ರಶಾಂತ್ ನಾತು