ಜಲ್ಲಿಕಟ್ಟು ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ಇದನ್ನು ವಿರೋಧಿಸಿ ಡಿಎಂಕೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

ಚೆನ್ನೈ (ಜ.12): ಜಲ್ಲಿಕಟ್ಟು ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ಇದನ್ನು ವಿರೋಧಿಸಿ ಡಿಎಂಕೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

ಜಲ್ಲಿಕಟ್ಟಿಗೆ ಸಂಬಂಧಿಸಿದಂತೆ ತೀರ್ಪಿನ ಕರಡು ತಯಾರಾಗಿದ್ದು ಶನಿವಾರಕ್ಕಿಂತ ಮುಂಚಿತವಾಗಿ ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲವೆಂದು ಈ ಮೊದಲು ಸುಪ್ರೀಂಕೋರ್ಟ್ ಹೇಳಿತ್ತು.

ಜಲ್ಲಿಕಟ್ಟು ನಿಷೇಧವನ್ನು ರದ್ದುಗೊಳಿಸಿ ಆದೇಶ ನೀಡುವಂತೆ ನ್ಯಾಯಪೀಠಕ್ಕೆ ಕೇಳುವುದು ಸರಿಯಲ್ಲ ಎಂದು ನ್ಯಾ. ಜಗದೀಶ್ ಸಿಂಗ್ ಖೇಹರ್ ನೇತೃತ್ವದ ಪೀಠ ಹೇಳಿದೆ.

ಅಮ್ಮನ ಹಾದಿಯನ್ನು ಅನುಸರಿಸುವ ನಾನು ಮತ್ತು ತಮಿಳುನಾಡು ಸರ್ಕಾರ ಜಲ್ಲಿಕಟ್ಟು ಕ್ರೀಡೆಯನ್ನು ಆಯೋಜಿಸುತ್ತೇವೆ. ಈ ನಿರ್ಧಾರದಿಂದ ಹಿಂತಿರುಗುವುದಿಲ್ಲ. ತಮಿಳರ ಪರಂಪರೆ ಮತ್ತು ಸಂಸ್ಕೃತಿಯನ್ನು ನಾವು ಎತ್ತಿ ಹಿಡಿಯುತ್ತೇವೆ ಎಂದು ಜನರಿಗೆ ಭರವಸೆ ನೀಡಲು ಬಯಸುತ್ತೇವೆ ಎಂದು ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಹೇಳಿದ್ದಾರೆ.