Asianet Suvarna News Asianet Suvarna News

ತ್ರಿವಳಿ ತಲಾಖ್ ವಿಚ್ಛೇದನದ 'ಕೆಟ್ಟ ಮತ್ತು ಅನಪೇಕ್ಷಿತ' ರೀತಿ: ಸುಪ್ರೀಂಕೋರ್ಟ್

ವಿವಾದ ಗ್ರಾಸವಾಗಿರುವ ತ್ರಿವಳಿ ತಲಾಕ್ನ ಸಾಂವಿಧಾನಿಕ ಸಿಂಧುತ್ವದ  ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್’ನ ಐವರು  ನ್ಯಾಯಾಧೀಶರ ಪೀಠವು ತ್ರಿವಳಿ ತಲಾಖ್  ವಿಚ್ಚೇದನದ ‘ಕೆಟ್ಟ ಹಾಗೂ ಅನಪೇಕ್ಷಿತ ‘ ರೀತಿಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.

Supreme Court Triple talaq is worst form of marriage dissolution

ನವದೆಹಲಿ (ಮೇ.12): ವಿವಾದ ಗ್ರಾಸವಾಗಿರುವ ತ್ರಿವಳಿ ತಲಾಖ್'ನ ಸಾಂವಿಧಾನಿಕ ಸಿಂಧುತ್ವದ  ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್’ನ ಐವರು ನ್ಯಾಯಾಧೀಶರ ಪೀಠವು ತ್ರಿವಳಿ ತಲಾಖ್ ವಿಚ್ಛೇದನದ ‘ಕೆಟ್ಟ ಹಾಗೂ ಅನಪೇಕ್ಷಿತ ‘ ರೀತಿಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಮುಸ್ಲೀಂ ವೈಯಕ್ತಿಕ ಕಾನೂ ಮಂಡಳಿಯು ತ್ರಿವಳಿ ತಲಾಖಿಗೆ ಸಿಂಧುತ್ವ ನೀಡುತ್ತದೆ. ಆದರೆ ಇದನ್ನು ಸುಪ್ರೀಂ ಕೋರ್ಟ್ ಖಂಡಿಸಿದೆ.

ಮುಖ್ಯ ನ್ಯಾ. ಜೆ.ಎಸ್ ಖೇಹರ್ ನೇತೃತ್ವದ ಐವರು ನ್ಯಾಯಾಧೀಶರ  ನ್ಯಾಯಪೀಠವು ತ್ರಿವಳಿ ತಲಾಖ್ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿತು. ಜೊತೆಗೆ ಬಹುಪತ್ನಿತ್ವ, ಮರುಮದುವೆ, ಹಾಗೂ ತ್ರಿವಳಿ ತಲಾಖ್ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ಹಿರಿಯ ವಕೀಲ ರಾಮ್ ಜೇಠ್ಮಲಾನಿ ‘ಇದೊಂದು ಅಸಹ್ಯವಾದ ಪದ್ದತಿ.ಇದರಲ್ಲಿ ಗಂಡನಷ್ಟೇ ಸಮನಾದ ಹಕ್ಕನ್ನು ಹೆಂಡತಿಗೆ ನೀಡಲಾಗುವುದಿಲ್ಲ.  ಸಂವಿಧಾನದ ಆರ್ಟಿಕಲ್ 14 ರ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಇದೊಂದು ಅಸಾಂವಿಧಾನಿಕ ವರ್ತನೆ ಎಂದಿದ್ದಾರೆ.

ಮುಸ್ಲೀಂ ರಾಷ್ಟ್ರಗಳಾದ ಪಾಕಿಸ್ತಾನ, ಅಫಘಾನಿಸ್ತಾನ, ಮೊರಾಕ್ಕೋ, ಸೌದಿ ಅರೇಬಿಯಾ ದೇಶಗಳಲ್ಲಿ ತ್ರಿವಳಿ ತಲಾಖನ್ನು ನಿಷೇಧಿಸಿರುವುದನ್ನು ಇದೇ ಸಂದರ್ಭದಲ್ಲಿ  ಸುಪ್ರೀಂಕೋರ್ಟ್ ಸ್ಮರಿಸಿದೆ.    

Follow Us:
Download App:
  • android
  • ios