ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ತೀರ್ಪಿನ ಕುರಿತು ಅಯ್ಯಪ್ಪ ಭಕ್ತರ ಸಂಘ ಸೇರಿದಂತೆ 19 ಮರುಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಸು ಸುಪ್ರೀಂ ಕೋರ್ಟ್ ಮುಂದಾಗಿದೆ. ಆದರೆ ಇದಕ್ಕೂ ಮುನ್ನ 2 ದಿನಗಳ ಕಾಲ ಅಯ್ಯಪ್ಪ ದೇಗುಲ ಭಕ್ತರಿಗಾಗಿ ತೆರಯಿಲಿದೆ.
ನವದೆಹಲಿ(ಅ.24): ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರವೇಶಾವಕಾಶ ಕಲ್ಪಿಸಿರುವ ತನ್ನದೇ ನಿರ್ಧಾರವನ್ನು ಪ್ರಶ್ನಿಸಿರುವ ಮರುಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ನವೆಂಬರ್ 13ರ ಮಧ್ಯಾಹ್ನ 3ಕ್ಕೆ ನಡೆಸಲಿದೆ.
ಅಯ್ಯಪ್ಪ ಭಕ್ತರ ಸಂಘ ಸೇರಿದಂತೆ 19 ಮರುಪರಿಶೀಲನಾ ಅರ್ಜಿಗಳ ಹಣೆಬರಹ ನಿರ್ಧರಿಸುವ ಸಂಬಂಧ ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ ರಂಜನ್ ಗೊಗೋಯ್ ಹಾಗೂ ನ್ಯಾ ಸಂಜಯ್ ಕಿಶನ್ ಕೌಲ್ ಅವರ ನ್ಯಾಯಪೀಠ, ನವೆಂಬರ್ 13ರಂದು ವಿಚಾರಣೆ ನಡೆಸಲು ಈಗಾಗಲೇ ನಿರ್ಧರಿಸಲಾಗಿದೆ ಎಂದರು.
ಆದರೆ ಸುಪ್ರೀಂಕೋರ್ಟ್‌ನ ಈ ವಿಚಾರಣೆಗೂ ಮುನ್ನವೇ ಅಂದರೆ ನ.5 ಮತ್ತು 6ರಂದು 2 ದಿನಗಳ ಕಾಲ ಶಬರಿಮಲೆ ದೇಗುಲದ ಬಾಗಿಲು ವಿಶೇಷ ಪೂಜೆಗಾಗಿ ತೆರೆಯಲಿದೆ. ಹೀಗಾಗಿ ಆ 2 ದಿನಗಳಂದು ಮತ್ತೆ 10-50ರ ವಯೋಮಾನದ ಮಹಿಳೆಯರು ದೇಗುಲ ಪ್ರವೇಶಕ್ಕೆ ಯತ್ನಿಸಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.
ದೇಗುಲ ಪ್ರವೇಶಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಕೋರ್ಟ್ ಅನುಮತಿ ನೀಡಿದ್ದರು, ಅಯ್ಯಪ್ಪನ ಭಕ್ತರು ಮಾತ್ರ, ಪ್ರವೇಶಕ್ಕೆ ಯತ್ನಿಸಿದ 10ಕ್ಕೂ ಹೆಚ್ಚು ಮಹಿಳೆಯರನ್ನು ತಡೆದು ಕಳುಹಿಸಿದ್ದಾರೆ.
