ನವದೆಹಲಿ (ಸೆ.29): ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತು ಕೇಂದ್ರ ಮಧ್ಯಸ್ಥಿಕೆ ಸಭೆ ವಿಫಲವಾದ್ದರಿಂದ ಮತ್ತೆ ಸುಪ್ರೀಂ ಅಂಗಳಕ್ಕೆ ಕಾವೇರಿ ಚೆಂಡು ತಲುಪಿದೆ.
ನಾಳೆಗೆ ವಿಚಾರಣೆ ಮುಂದೂಡಿರುವ ಕೋರ್ಟ್ ಮದ್ಯಾಹ್ನ ಎರಡು ಗಂಟೆಗೆ ವಿಚಾರಣೆ ಕೈಗೆತ್ತಿಗೊಳ್ಳಲಿದೆ. ಕಳೆದ ಸೆಪ್ಪಂಬರ್ 20ರಂದು ನೀಡಿದ್ದ ಆದೇಶ ಮತ್ತು ಸೆಪ್ಬಂಬರ್ 27ರಂದು ನೀಡಿದ್ದ ಆದೇಶವನ್ನು ಕರ್ನಾಟಕ ಪಾಲಿಸಿಲ್ಲ.
ಬದಲಾಗಿ ಅಧಿವೇಶನದಲ್ಲಿ ಕಾವೇರಿ ನಿರ್ಣಯ ಕೈಗೊಂಡು ನಮಗೆ ನೀರಿಲ್ಲ ಎಂಬ ವಾದವನ್ನು ಮುಂದಿಟ್ಟುಕೊಂಡು ಕಾನೂನು ಹೋರಾಟ ನಡೆಸುತ್ತಿದೆ.
ನಾಳೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು ಯಾವ ರೀತಿಯ ಆದೇಶ ಹೊರಬೀಳುತ್ತೆ ಅನ್ನೋದು ಕುತೂಹಲ ಮೂಡಿಸಿದೆ.
