ಕಾಗದ-ಪತ್ರಗಳಿಲ್ಲದೇ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಆದರೆ ಇತ್ತೀಚಿಗೆ ಕಾಗದದ ಬಳಕೆ ಹೆಚ್ಚಾಗುತ್ತಿದ್ದು ಅದನ್ನು ತಗ್ಗಿಸಿ ಕಂಪ್ಯೂಟರೀಕರಣಗೊಳಿಸಲು ನ್ಯಾಯಾಲಯ ಚಿಂತನೆ ನಡೆಸಿದೆ.

ನವದೆಹಲಿ (ಮಾ.23): ಕಾಗದ-ಪತ್ರಗಳಿಲ್ಲದೇ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಆದರೆ ಇತ್ತೀಚಿಗೆ ಕಾಗದದ ಬಳಕೆ ಹೆಚ್ಚಾಗುತ್ತಿದ್ದು ಅದನ್ನು ತಗ್ಗಿಸಿ ಕಂಪ್ಯೂಟರೀಕರಣಗೊಳಿಸಲು ನ್ಯಾಯಾಲಯ ಚಿಂತನೆ ನಡೆಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳ ಮೂಲಕ ದಾಖಲೆಗಳನ್ನು ವಿದ್ಯನ್ಮಾನ ಮೂಲಕ ತರಿಸಿಕೊಳ್ಳುತ್ತೇವೆ. ಅದರ ಸಹಾಯದಿಂದ ವಿಚಾರಣೆ ನಡೆಸುತ್ತೇವೆ. ಇನ್ನು ಆರೇಳು ತಿಂಗಳಲ್ಲಿ ಅರ್ಜಿಗಳು ಮತ್ತು ದಾಖಲೆಗಳ ಬೃಹತ್ ಕಾಗದ ಪತ್ರ ಕಡತಗಳ ಅಗತ್ಯವಿರುವುದಿಲ್ಲ ಎಂದು ಮುಖ್ಯ ನ್ಯಾ. ಜೆ.ಎಸ್. ಖೇಹರ್ ಹೇಳಿದ್ದಾರೆ.

ಕೆಳಹಂತದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಮಾತ್ರ ಫೈಲ್ ಮಾಡಿ ಎಂದು ವಕೀಲರಿಗೆ ಅವರು ಹೇಳಿದ್ದಾರೆ.