ತಾಜ್ ಮಹಲ್ ರಕ್ಷಣೆ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ತಪರಾಕಿ!

First Published 11, Jul 2018, 5:19 PM IST
Supreme Court Slams Centre for not protecting Taj Mahal
Highlights

ತಾಜ್ ಮಹಲ್ ರಕ್ಷಣೆಯಲ್ಲಿ ಕೇಂದ್ರ ವಿಫಲ

ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಪರಾಕಿ

ರಕ್ಷಣಾ ಕ್ರಮದ ಕುರಿತು ವರದಿ ನೀಡುವಂತೆ ಸೂಚನೆ

ತಾಜ್ ಮಹಲ್ ಕಟ್ಟಡದ ಸುತ್ತ ದಟ್ಟ ವಾಯುಮಾಲಿನ್ಯ 
 

ನವದೆಹಲಿ(ಜು.11): ವಿಶ್ವ ಪ್ರಸಿದ್ಧ ಪಾರಂಪರಿಕ  ತಾಣ ತಾಜ್ ಮಹಲ್ ರಕ್ಷಣೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಸಂಬಂಧಿತ ಆಡಳಿತ ಸಂಸ್ಥೆಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿದೆ. ತಾಜ್ ಮಹಲ್ ಸಂರಕ್ಷಣೆ ಕುರಿತು ಸ್ಪಷ್ಟ ದಾಖಲೆ ಒದಗಿಸಲು ಉತ್ತರ ಪ್ರದೇಶ ಸರ್ಕಾರ ವಿಫಲವಾಗಿದ್ದಕ್ಕೆ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಇದೇ ವೇಳೆ ತಾಜ್ ಮಹಲ್ ರಕ್ಷಣೆಗಾಗಿ ತೆಗೆದುಕೊಂಡಿರುವ ಕ್ರಮದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಒದಗಿಸುವಂತೆ  ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ತಾಜ್ ಮಹಲ್ ರಕ್ಷಣೆ ಕುರಿತ ಸಂಸದೀಯ ಸಮಿತಿ ವರದಿ ಹೊರತುಪಡಿಸಿ ಕೇಂದ್ರಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಎಂ. ಬಿ. ಲೊಕುರ್ ಮತ್ತು ದೀಪಕ್ ಗುಪ್ತಾ ಅವರಿದ್ದ  ದ್ವಿಸದಸ್ಯ ಪೀಠ ಹೇಳಿದೆ.

ತಾಜ್ ಮಹಲ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿನ ವಾಯುಮಾಲಿನ್ಯ ಪ್ರಮಾಣ ಕುರಿತು ವರದಿ ನೀಡಲು ಕಾನ್ಪುರದಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆಗೆ ಹೇಳಲಾಗಿದ್ದು,  ಇನ್ನೂ ನಾಲ್ಕು ತಿಂಗಳೊಳಗೆ ವರದಿ ನೀಡುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಭರವಸೆ ನೀಡಿದೆ.

loader