ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತೊಮ್ಮೆ ಟ್ರೋಲ್ ಗೆ ಒಳಗಾಗಿದ್ದಾರೆ. ಶಬರಿಮಲೆ ತೀರ್ಪಿನ ಬಗ್ಗೆ ಮಾತನಾಡುವಾಗ ನೀಡಿದ ಹೇಳಿಕೆ ಅವರನ್ನು ಟ್ರೋಲ್ ಗೆ ಗುರಿಮಾಡಿದೆ. ಹಾಗಾದರೆ ಇರಾನಿ ನೀಡಿದ ಅಂಥ ಹೇಳಿಕೆ ಏನು?
ಮುಂಬೈ[ಅ.23] ಮಹಿಳೆಯರು ಮುಟ್ಟಿನ ಸಮಯದಲ್ಲಿ ಬಳಸಿದ ನ್ಯಾಪ್ಕಿನ್ ಅನ್ಗೆನು ಳೆಯರ ಮನೆಗೆ ಒಯ್ತಿರಾ? ಹಾಗಾದ್ರೆ ದೇವರ ಮನೆಗೆ ಒಯ್ಯುವುದು ಸರಿನಾ? ಎಂದು ಪ್ರಶ್ನಿಸುವ ಮೂಲಕ ಕೇಂದ್ರ ಸಚಿವೆ ಸ್ಮೃತಿ ಇರಾನಿ ಟ್ರೋಲ್ ಗೊಳಗಾಗಿದ್ದಾರೆ.
ಮುಂಬೈಯಲ್ಲಿ ನಡೆದ ಯಂಗ್ ಥಿಂಕರ್ಸ್ ಸಮ್ಮೇಳನದಲ್ಲಿ ಮಾತನಾಡಿದ ಸ್ಮೃತಿ ಇರಾನಿ ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕೇಂದ್ರ ಸಚಿವೆಯಾಗಿ ಮಾತನಾಡುವುದು ಸರಿಯಲ್ಲ. ಆದರೆ, ಪ್ರತಿಯೊಬ್ಬರಿಗೆ ಪ್ರಾಥಿಸುವ ಹಕ್ಕಿದೆ, ಆದರೆ ಅಪವಿತ್ರಗೊಳಿಸುವ ಹಕ್ಕಿಲ ಎಂದಿದ್ದಾರೆ.
ಮುಟ್ಟಿನ ರಕ್ತತುಂಬಿಕೊಂಡಿರುವ ನ್ಯಾಪ್ಕಿನನ್ನು ಯಾರಾದರೂ ಗೆಳೆಯರ ಮನೆಗೆ ಕೊಂಡೊಯ್ತಾರಾ? ಹಾಗಾದರೆ, ದೇವರ ಮನೆಗೆ ಕೊಂಡೊಯ್ಯುವುದು ಸರೀನಾ ಎಂದು ಪ್ರಶ್ನಿಸಿದ್ದಾರೆ.
ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶ ಮಾಡಲು ಮಹಿಳೆಯರು ಮುಂದಾಘಿದ್ದು, ಅದಕ್ಕೆ ವಿರೋಧವಾಗಿ ವ್ಯಕ್ತವಾದ ಪ್ರತಿಭಟನೆ, ಲಾಠಿ ಚಾರ್ಜ್ ಎಲ್ಲವೂ ಕಳೆದ ಒಂದು ವಾರದಿಂದ ಸುದ್ದಿಯಾಗುತ್ತಿದ್ದು ಇದೀಗ ಸ್ಮೃತಿ ಟ್ರೋಲಿಗರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.
