ಸಹಾರಾ ಇಂಡಿಯಾ ಹೂಡಿಕೆದಾರರಿಗೆ ಕೊಟ್ಟಿರುವ ರೂ.18.000 ಕೋಟಿ ಹಣದ ಮೂಲವನ್ನು ಸೂಚಿಸಲು ಕಂಪನಿಗೆ ಸುಪ್ರೀಂ ಇಂದು ಕೇಳಿದೆ.
ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ವಾಪಸ್ ಮಾಡಿರುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನ್ಯಾಯಾಲಯ, ಅಲ್ಪಾವಧಿಯಲ್ಲಿ ಹಣ ಮರುಪಾವತಿ ಮಾಡಿರುವುದು ಕಷ್ಟದ ವಿಚಾರ ಎಂದು ಅಭಿಪ್ರಾಯಪಟ್ಟಿದೆ.
ಸಹರಾ ಇಂಡಿಯಾ ಪರ ವಕೀಲ, ಕಪಿಲ್ ಸಿಬಲ್ “ ಗ್ರಾಸ್ ವೇನರ್ ಹೌಸ್ ಹೋಟೆಲ್ ವ್ಯವಹಾರದಲ್ಲಿ ಮುಂಚಿತವಾಗಿ ರೂ. 310 ಕೋಟಿಗಳನ್ನು ಕಂಪನಿ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ. ಹೆಚ್ಚುವರಿಯಾಗಿ ತೆಗೆದುಕೊಂಡ ಹಣಕ್ಕೆ ಆದೇಶ ಹೊರಡಿಸಲು ಸುಪ್ರೀಂ ನಿರಾಕರಿಸಿದೆ.
ನೀವು ಹೂಡಿಕೆದಾರರಿಗೆ ಕೊಟ್ಟಿರುವ ಹಣದ ಮೂಲವನ್ನು ನಮಗೆ ತಿಳಿಸಿದರೆ ನಾವು ಇಡೀ ಪ್ರಕರಣಕ್ಕೆ ಇತಿಶ್ರೀ ಹಾಡಬಹುದು ಎಂದು ಕೋರ್ಟ್ ಸಹಾರಾ ಕಂಪನಿಗೆ ಹೇಳಿದೆ.
