Asianet Suvarna News Asianet Suvarna News

ಆಧಾರ್ ಕಾರ್ಡ್ ವಿಚಾರವಾಗಿ ಮಮತಾ ಬ್ಯಾನರ್ಜಿಗೆ ಸುಪ್ರೀಂನಲ್ಲಿ ಮುಖಭಂಗ; ವೈಯಕ್ತಿಕವಾಗಿ ಅರ್ಜಿ ಸಲ್ಲಿಸಿ ಎಂದ ಕೋರ್ಟ್

ಮೊಬೈಲ್ ಫೋನ್ ನಂಬರ್’ಗಳಿಗೆ ಆ಼ಧಾರ್ ಕಾರ್ಡನ್ನು ಲಿಂಕ್ ಮಾಡಬೇಕು ಎನ್ನುವ ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಮುಖಭಂಗವಾಗಿದೆ. ನೀವು ವೈಯಕ್ತಿಕವಾಗಿ ಕೋರ್ಟ್ ಮೊರೆ ಹೋಗಿ. ಸರ್ಕಾರದ ಪರವಾಗಿ ಮೊರೆ ಹೋಗಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

Supreme Court Pulls Up Mamata Govt on Aadhaar Asks How State Can File Such a Plea  Centre Too Gets a Notice

ನವದೆಹಲಿ (ಅ.30): ಮೊಬೈಲ್ ಫೋನ್ ನಂಬರ್’ಗಳಿಗೆ ಆ಼ಧಾರ್ ಕಾರ್ಡನ್ನು ಲಿಂಕ್ ಮಾಡಬೇಕು ಎನ್ನುವ ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಮುಖಭಂಗವಾಗಿದೆ. ನೀವು ವೈಯಕ್ತಿಕವಾಗಿ ಕೋರ್ಟ್ ಮೊರೆ ಹೋಗಿ. ಸರ್ಕಾರದ ಪರವಾಗಿ ಮೊರೆ ಹೋಗಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ರಾಜ್ಯಸರ್ಕಾರ ಇಂತಹ ಅರ್ಜಿಯನ್ನು ಸಲ್ಲಿಸಲು ಹೇಗೆ ಸಾಧ್ಯ? ಸಂಯುಕ್ತ ವ್ಯವಸ್ಥೆಯಲ್ಲಿ ಒಂದು ರಾಜ್ಯ ಹೇಗೆ ಸಂಸತ್ತಿನ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಲೇರಲು ಸಾಧ್ಯವೆಂದು ನ್ಯಾ. ಎಕೆ ಸಿಕ್ರಿ ಅಂಡ್ ಅಶೋಕ್ ಭೂಷಣ್ ನೇತೃತ್ವದ ಪೀಠ ಪ್ರಶ್ನಿಸಿದೆ.

ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ವಾದ ಮಾಡಿರುವ ಹಿರಿಯ ವಕೀಲ ಕಪಿಲ್ ಸಿಬಲ್,  ಸರ್ಕಾರದ ಕಾರ್ಮಿಕ ಇಲಾಖೆ ಸಲ್ಲಿಸಿರುವ ಅರ್ಜಿಯಾಗಿದೆಯೇ ಹೊರತು ಸರ್ಕಾರದ ಸಲ್ಲಿಸಿರುವ ಅರ್ಜಿಯಲ್ಲ ಎಂದು ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ವೈಯಕ್ತಿಕವಾಗಿ ಅರ್ಜಿಯನ್ನು ಸಲ್ಲಿಸಲಿ. ನಾವದನ್ನು ಪರಿಗಣಿಸುತ್ತೇವೆ ಎಂದು ಕೋರ್ಟ್ ಹೇಳಿದೆ.

 

Follow Us:
Download App:
  • android
  • ios