ಬೆಂಖಗಳೂರು[ಸೆ.26]: ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತಮ್ಮ ಅಳಿವು ಉಳಿವಿನ ಕಾನೂನು ಹೋರಾಟ ನಡೆಸುತ್ತಿರುವ 17 ಅನರ್ಹ ಶಾಸಕರ ಸಂಕಟ ಮತ್ತೆ ಮುಂದುವರೆದಿದೆ. ಅನರ್ಹ ಶಾಸಕರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪರ ವಕೀಲರು ವಾದಿಸಿದ್ದು, ಈ ಪ್ರಕರಣದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಮಧ್ಯಾಹ್ನಕ್ಕೆ ಮುಂದೂಡಿದೆ.

ಅನರ್ಹರ ಪರ ವಕೀಲರ ವಾದ?

ರಾಜೀನಾಮೆ ನೀಡಿದ ಶಾಸಕರ ತೀರ್ಮಾನವು ಸ್ವಇಚ್ಛೆಯದ್ದೇ? ನೈಜವಾದದ್ದೇ? ಎಂಬುದನ್ನು ಮಾತ್ರ ವಿಧಾನಸಭಾ ಸ್ಪೀಕರ್ ಗಮನಿಸಬೇಕು

ಶಂಕರ್ ಪಕ್ಷ ಕಾಂಗ್ರೆಸ್ಸಲ್ಲಿ ವಿಲೀನವಾಗಿಲ್ಲ. ಹಾಗಾಗಿ, ವಿಪ್ ಅನ್ವಯಿಸಲ್ಲ. ಶ್ರೀಮಂತ್ ಪಾಟೀಲ್ ಅನಾರೋಗ್ಯ ದಿಂದಾಗಿ ಕಲಾಪಕ್ಕೆ ಹೋಗಿಲ್ಲ

ಜೆಡಿಎಸ್‌ನ ೩ ಶಾಸಕರು ರಾಜೀನಾಮೆ ನೀಡಿದ ಬಳಿಕವಷ್ಟೇ ಅನರ್ಹತೆಯ ದೂರು ದಾಖಲಾಗಿದೆ. ಇವು ಅನರ್ಹತೆಯ ಪ್ರಕರಣಗಳೇ ಅಲ

ಜಿಂದಾಲ್ ವಿಚಾರದಲ್ಲಿ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಇತರರಿಗೂ, ಆನಂದ್ ರಾಜೀನಾಮೆಗೂ ಯಾವುದೇ ಸಂಬಂಧ ಇಲ್ಲ

ಸರ್ಕಾರದ ನಿಲುವು ವಿರೋಧಿಸಿ ಸುಧಾಕರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಪಕ್ಷಕ್ಕಲ್ಲ. ಅವರು ಇತರರ ಜತೆ ಗುರುತಿಸಿಯೇ ಇಲ್ಲ.

ರಾಜೀನಾಮೆ ನೀಡಿ ಅನರ್ಹಗೊಂಡು ಸುಪ್ರೀಂ ಮೆಟ್ಟಿಲೇರಿದ್ದ 17 ಶಾಸಕರು ಯಾರ್ಯಾರು?

1. ರಮೇಶ್ ಜಾರಕಿಹೊಳಿ, ಗೋಕಾಕ್

2. ಮಹೇಶ್ ಕುಮಟಳ್ಳಿ, ಅಥಣಿ

3. ಶಂಕರ್, ರಾಣೆಬೆನ್ನೂರು

4. ಆನಂದ್ ಸಿಂಗ್, ಹೊಸಪೇಟೆ

5. ವಿಶ್ವನಾಥ್, ಹುಣಸೂರು

6. ಪ್ರತಾಪ್ ಗೌಡ ಪಾಟೀಲ್, ಮಸ್ಕಿ

7. ಬಿ.ಸಿ. ಪಾಟೀಲ್, ಹಿರೆಕೇರೂರು

8. ಶಿವರಾಂ ಹೆಬ್ಬಾರ್, ಯಲ್ಲಾಪುರ

9. ನಾರಾಯಣಗೌಡ, ಕೆಆರ್.ಪೇಟೆ

10. ಎಸ್.ಟಿ. ಸೋಮಶೇಖರ್, ಯಶವಂತಪುರ

11. ಗೋಪಾಲಯ್ಯ, ಮಹಾಲಕ್ಷ್ಮಿ ಲೇಔಟ್

12. ಭೈರತಿ ಬಸವರಾಜ್, ಕೆ.ಆರ್.ಪುರಂ

13. ಮುನಿರತ್ನ, ಆರ್.ಆರ್.ನಗರ

14. ರೋಷನ್ ಬೇಗ್, ಶಿವಾಜಿನಗರ

15. ಎಂಟಿಬಿ ನಾಗರಾಜ್, ಹೊಸಕೋಟೆ

16. ಸುಧಾಕರ್, ಚಿಕ್ಕಬಳ್ಳಾಪುರ

17. ಶ್ರೀಮಂತ್ ಪಾಟೀಲ್, ಕಾಗವಾಡ