ಸುಪ್ರೀಂ ಕೋರ್ಟ್ ನಮ್ಮದೇ, ರಾಮಮಂದಿರ ಖಚಿತ : ಬಿಜೆಪಿ ಸಚಿವ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Sep 2018, 1:00 PM IST
Supreme Court Ours Ram Temple Will Be Built  Says BJP Minister
Highlights

ಸುಪ್ರೀಂಕೋರ್ಟ್ ನಮ್ಮದೇ ಆಗಿದ್ದು ಅಯೋಧ್ಯೆಯಲ್ಲಿ ರಾಮಂದಿರ ನಿರ್ಮಾಣ ಮಾಡುವುದು ಖಚಿತ ಎಂದು ಉತ್ತರ ಪ್ರದೇಶದ ಸಚಿವರು ನೀಡಿದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. 

ಲಖನೌ: ‘ಸುಪ್ರೀಂ ಕೋರ್ಟ್ ನಮ್ಮದೇ’ ಆಗಿರುವುದರಿಂದ ಅಯೋಧ್ಯೆಯಲ್ಲಿ ಬಿಜೆಪಿ ಭರವಸೆಯಂತೆ ರಾಮ ಮಂದಿರ ನಿರ್ಮಿಸುತ್ತೇವೆ ಎಂದು ಉತ್ತರ ಪ್ರದೇಶ ಸರ್ಕಾರದ ಸಹಕಾರ ಸಚಿವ ಮುಕುಟ್ ಬಿಹಾರಿ ವರ್ಮಾ ಹೇಳಿದ್ದಾರೆ.

‘ಬಿಜೆಪಿ ಅಭಿವೃದ್ಧಿಯ ವಿಷಯದ ಆಧಾರದಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ, ಇದು ನಮ್ಮ ಅಂತಿಮ ಗುರಿಯಾಗಿರುವುದರಿಂದ ರಾಮ ಮಂದಿರ ನಿರ್ಮಿಸುತ್ತೇವೆ. ವಿಷಯ ಸುಪ್ರೀಂ ಕೋರ್ಟ್ ನಲ್ಲಿದೆ ಮತ್ತು ಸುಪ್ರೀಂ ಕೋರ್ಟ್ ನಮ್ಮದು ಎಂದಿದ್ದಾರೆ. 

ಅಲ್ಲದೇ ನ್ಯಾಯಾಂಗ, ಆಡಳಿತ, ದೇಶ ಹಾಗೂ ರಾಮ ಮಂದಿರ ನಮಗೆ ಸೇರಬೇಕಾದುದು’ ಎಂದು ವರ್ಮಾ ಹೇಳಿದ್ದಾರೆ. ನ್ಯಾಯಾಂಗವೇ ನಮ್ಮದು ಎಂಬ ಅವರ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

loader