ನವದೆಹಲಿ(ಅ.04): ಕರ್ನಾಟಕದ ವಾಸ್ತವ ಸ್ಥಿತಿ ಸುಪ್ರೀಂಕೋರ್ಟ್`ಗೆ ಅರ್ಥವಾದಂತೆ ಕಾಣುತ್ತಿದೆ. ಕರ್ನಾಟಕ ಪರ ವಕೀಲರ ಖಡಕ್ ವಾದ ಆಲಿಸಿದ ಸುಪ್ರೀಂಕೋರ್ಟ್ ಅಕ್ಟೋಬರ್ 7ರಿಂದ 18ರವರೆಗೆ 2 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂಕೋರ್ಟ್, ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದಕ್ಕೂ ಮುನ್ನ ಅಕ್ಟೋಬರ್ 18ರವರೆಗೆ ಎಷ್ಟು ನೀರು ಬಿಡುತ್ತೀರ ತಿಳಿಸಿ ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಕರ್ನಾಟಕ 1500 ಕ್ಯೂಸೆಕ್ ನೀರು ಬಿಡುವುದಾಗಿ ಹೇಳಿತ್ತು. ಇದನ್ನ ಪರಿಗಣಿಸಿದ ಸುಪ್ರೀಂಕೋರ್ಟ್ ಇದರ ಜೊತೆಗೆ ಹೆಚ್ಚುವರಿ 500 ಕ್ಯೂಸೆಕ್ ಸೇರಿಸಿ 2000 ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿದೆ. ಸುಪ್ರೀಂಕೋರ್ಟ್`ನ ೀ ಆದೇಶದಿಂದ ಕರ್ನಾಟಕ ಸ್ವಲ್ಪಮಟ್ಟಿಗೆ ನಿಟ್ಟುಸಿರುಬಿಡುವಂತಾಗಿದೆ.