Asianet Suvarna News Asianet Suvarna News

ತಮಿಳುನಾಡಿಗೆ ನೀರು ಬಿಡಿ, ಪರಿಣಾಮ ಎದುರಿಸಿ: ಸುಪ್ರೀಂ ಕೋರ್ಟ್

ತಮಿಳುನಾಡಿಗೆ 4 ಟಿಎಂಸಿ ನೀರು ಬಿಡಲು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಒಮ್ಮೆ ಆದೇಸ ನೀಡಿತ್ತು. ಆದರೆ, ರಾಜ್ಯ ಸರಕಾರ ಕೋರ್ಟಿನ ಈ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ತುಸು  ಕಾಲಾವಕಾಶ  ನೀಡಿದೆ. ‘ತಮಿಳುನಾಡಿಗೆ ನೀರು ಬಿಡಿ, ಇಲ್ಲವೇ ಪರಿಣಾಮ ಎದುರಿಸಿ’ ಎಂದು  ಕರ್ನಾಟಕಕ್ಕೆ ನ್ಯಾ. ದೀಪಕ್​ ಮಿಶ್ರಾ ನೇತೃತ್ವದ ಪೀಠ ಎಚ್ಚರಿಸಿದೆ. 

Supreme Court Orders to karnataka  let water to Tamilnadu

ಬೆಂಗಳೂರು (ಮೇ ೦3): ತಮಿಳುನಾಡಿಗೆ 4 ಟಿಎಂಸಿ ನೀರು ಬಿಡಲು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಆದೇಶಿಸಿದೆ. ಆದರೆ, ಸರಕಾರ ಇದನ್ನು ವಿರೋಧಿಸಿದ್ದರಿಂದ ತುಸು ಕಾಲಾವಕಾಶ ನೀಡಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಲೇಬೇಕು.  ‘ತಮಿಳುನಾಡಿಗೆ ನೀರು ಬಿಡಿ, ಇಲ್ಲವೇ ಪರಿಣಾಮ ಎದುರಿಸಿ’ ಎಂದು  ಕರ್ನಾಟಕಕ್ಕೆ ನ್ಯಾ. ದೀಪಕ್​ ಮಿಶ್ರಾ ನೇತೃತ್ವದ ಪೀಠ ಎಚ್ಚರಿಕೆ ನೀಡಿದೆ. 

ತಮಿಳುನಾಡಿಗೆ ಮೇ ತಿಂಗಳೊಳಗೆ 4 ಟಿಎಂಸಿ ನೀರು ಬಿಡಲೇಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. 10 ದಿನದೊಳಗೆ ಕಾವೇರಿ ಸ್ಕೀಂ ರಚನೆಗೆ ಗಡುವು ನೀಡಿದೆ. ಕಾವೇರಿ ಸ್ಕೀಂ ಕರಡು ರಚಿಸಲು ಕೇಂದ್ರಕ್ಕೆ ಸೂಚನೆ ನೀಡಿದೆ. ಮುಂದಿನ ವಿಚಾರಣೆ ಮೇ 8ಕ್ಕೆ ಮುಂದೂಡಿದೆ. ಕರ್ನಾಟಕ ಚುನಾವಣೆ ಮುಗಿಯುವವರೆಗೆ ಕೇಂದ್ರ ಸಮಯಾವಕಾಶ ಕೋರಿದೆ. 

ಸ್ಕೀಮ್ ನ ಕರಡನ್ನು ಸಚಿವ ಸಂಪುಟದ ಮುಂದಿಡಬೇಕು ಎಂದು ಹೇಳಿದ ಅಟಾರ್ನಿ ಜನರಲ್ ಹೇಳಿರುವುದಕ್ಕೆ ತಮಿಳುನಾಡು ವಿರೋಧ ವ್ಯಕ್ತಪಡಿಸಿದೆ.  

ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪಿನಲ್ಲಿ ನೀರು ಹಂಚಿಕೆಗೆ ಸ್ಕೀಂ ರಚಿಸಲು ಕೇಂದ್ರ ಸರಕಾರಕ್ಕೆ ಆರು ವಾರಗಳ ಗಡುವು ನೀಡಿತ್ತು. ಫೆ.16ರಂದು ನೀಡಿದ ಈ ತೀರ್ಪು ಹೊರ ಬಿದ್ದಿತ್ತು. ನಿಗದಿತ ಅವಧಿಯೊಳಗೆ ಸ್ಕೀಂ ರಚಿಸುವಲ್ಲಿ ಸರಕಾರ ವಿಫಲವಾಗಿತ್ತು. ಗಡುವು ಅಂತ್ಯವಾಗುವ ಕೊನೆಯ ದಿನ ಏ.9ಕ್ಕೆ ಸ್ಕೀಂ ರಚನೆಗೆ ಮೂರು ತಿಂಗಳು ಹೆಚ್ಚುವರಿ ಕಾಲಾವಕಾಶ ಕೋರಿತ್ತು. ಜತೆಗೆ ಸ್ಕೀಂನ ವ್ಯಾಖ್ಯೆಯ ಬಗ್ಗೆ ಸ್ಪಷ್ಟೀಕರಣ ಕೋರಿ ಅರ್ಜಿ ಸಲ್ಲಿಸಿತ್ತು. ಆಗ ಈ ಅರ್ಜಿಗೆ ಒಪ್ಪದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಗಡುವಿನೊಳಗೆ ಸ್ಕೀಂ ರಚಿಸದ ಕೇಂದ್ರದ ವಿಳಂಬ ನೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು.

Follow Us:
Download App:
  • android
  • ios