ಬಿಜೆಪಿ ನೇತೃತ್ವದ ಗೋವಾ ಸರ್ಕಾರಕ್ಕೆ ಇದೀಗ ಸಂಕಷ್ಟ ಎದುರಾಗಿದೆ. ಗೋವಾ ಸರ್ಕಾರಕ್ಕೆ ನ್ಯಾಯಯುತ ಸೂತ್ರ ಪಾಲಿಸಿಲ್ಲ ಎಂದು ಮಹಾದಾಯಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ. 

ನವದೆಹಲಿ : ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಮಹದಾಯಿ ನದಿ ನ್ಯಾಯಾಧಿಕರಣವು ನ್ಯಾಯಯುತ ನೀರು ಹಂಚಿಕೆ ಸೂತ್ರವನ್ನು ಪಾಲಿಸಿಲ್ಲ ಎಂದು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರ, ಗೋವಾ ಮತ್ತು ಕರ್ನಾಟಕ ಹಾಗೂ ಮಹಾರಾಷ್ಟ್ರಗಳಿಗೆ ನೋಟಿಸ್‌ ಜಾರಿ ಮಾಡಿದೆ. ಆರು ವಾರದೊಳಗೆ ಇದಕ್ಕೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ.

ಪರ್ರಿಕರ್‌ಗೆ ಪ್ರಾಣಾಪಾಯ: ಭದ್ರತೆ ಕೋರಿ ರಾಷ್ಟ್ರಪತಿಗೆ ಕಾಂಗ್ರೆಸ್ ಪತ್ರ!

ಮಹದಾಯಿ ಕೊಳ್ಳದಲ್ಲಿ ಒಟ್ಟು 188 ಟಿಎಂಸಿ ನೀರು ಲಭ್ಯವಿದ್ದು, ಅದರಲ್ಲಿ ಕರ್ನಾಟಕಕ್ಕೆ 13.5 ಟಿಎಂಸಿ, ಗೋವಾಕ್ಕೆ 24 ಟಿಎಂಸಿ ಮತ್ತು ಮಹಾರಾಷ್ಟ್ರಕ್ಕೆ 1.33 ಟಿಎಂಸಿ ನೀರನ್ನು ನಿಗದಿಗೊಳಿಸಿ ಮಹದಾಯಿ ನದಿ ನ್ಯಾಯಾಧಿಕರಣವು ಕಳೆದ ಆಗಸ್ಟ್‌ನಲ್ಲಿ ಅಂತಿಮ ಐ ತೀರ್ಪು ನೀಡಿತ್ತು.

ಈ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳು ಸುಪ್ರೀಂ ಕೋರ್ಟ್‌ ಕದ ಬಡಿದಿದ್ದರೆ, ನ್ಯಾಯಾಧಿಕರಣದಲ್ಲಿ ಸ್ಪಷ್ಟೀಕರಣ ಗೋವಾ ಅರ್ಜಿ ಸಲ್ಲಿಸಿದೆ.