ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಕಲ್ಕತ್ತಾ ಹೈಕೋರ್ಟ್ ನ್ಯಾ. ಸಿಎಸ್ ಕರ್ನನ್ ಗೆ ಸುಪ್ರೀಂಕೋರ್ಟ್ ಜಾಮೀನುಸಹಿತ ವಾರಂಟ್ ನೀಡಿದೆ. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ ಹಾಲಿ ಹಾಗೂ ನಿವೃತ್ತ ನ್ಯಾಯಾಧೀಶರಿಗೆ ದುರುದ್ದೇಶಪೂರಿತ ಪತ್ರ ಬರೆಯುತ್ತಿದ್ದರು ಎನ್ನುವ ಆರೋಪದ ಮೇರೆಗೆ ನ್ಯಾಯಾಂಗ ನಿಂದನೆ ಎದುರಿಸುತ್ತಿದ್ದರು.

ನವದೆಹಲಿ (ಮಾ.10): ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಕಲ್ಕತ್ತಾ ಹೈಕೋರ್ಟ್ ನ್ಯಾ. ಸಿಎಸ್ ಕರ್ನನ್ ಗೆ ಸುಪ್ರೀಂಕೋರ್ಟ್ ಜಾಮೀನುರಹಿತ ವಾರಂಟ್ ನೀಡಿದೆ. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ ಹಾಲಿ ಹಾಗೂ ನಿವೃತ್ತ ನ್ಯಾಯಾಧೀಶರಿಗೆ ದುರುದ್ದೇಶಪೂರಿತ ಪತ್ರ ಬರೆಯುತ್ತಿದ್ದರು ಎನ್ನುವ ಆರೋಪದ ಮೇರೆಗೆ ನ್ಯಾಯಾಂಗ ನಿಂದನೆ ಎದುರಿಸುತ್ತಿದ್ದರು.

ಮಾರ್ಚ್ 31 ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಖಚಿತಪಡಿಸಿಕೊಳ್ಳಿ ಎಂದು ಪ.ಬಂ. ಡಿಜಿಪಿಗೆ ಕೋರ್ಟ್ ಸೂಚಿಸಿದೆ.

ನ್ಯಾಯಾಂಗ ನಿಂದನೆ ನೋಟಿಸ್ ಗೆ ಪ್ರತಿಕ್ರಿಯಿಸಲು ಫೆ.08 ರಂದು ಕೋರ್ಟ್ ಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಅವರು ಗೈರು ಹಾಜರಾಗಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸಿ.ಎಸ್ ಕರ್ನನ್, ಸುಪ್ರೀಂಕೋರ್ಟ್ ನನ್ನ ಮೇಲೆ ಜಾಮೀನುರಹಿತ ವಾರಂಟ್ ಜಾರಿಗೊಳಿಸಿರುವುದು ನನ್ನ ಕರಿಯರ್ ಮತ್ತು ಜೀವನವನ್ನು ನಾಶ ಮಾಡುವ ಪ್ರಯತ್ನ ಎಂದಿದ್ದಾರೆ.