ನವದೆಹಲಿ (ಸೆ.30): ಆರ್​ಜೆಡಿ ಮಾಜಿ ಸಂಸದ ಶಹಾಬುದ್ದೀನ್​ ಜಾಮೀನು ರದ್ದುಪಡಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

ಆರ್’ಜೆಡಿ ವರಿಷ್ಠ ಲಾಲೂ ಪ್ರಸಾದ್’ರ ಆಪ್ತನಾಗಿರುವ ಶಹಾಬುದ್ದೀನ್’ಗೆ ಇತ್ತೀಚೆಗೆ ಜಾಮೀನು ಸಿಕ್ಕಿತ್ತು. ಸುಪ್ರೀಂ ಕೋರ್ಟ್ ಜಾಮೀನನ್ನು ರದ್ದುಪಡಿಸಿರುವುದರಿಂದ ಕುಖ್ಯಾತ ಗ್ಯಾಂಗ್​ಸ್ಟರ್​ ಶಹಾಬುದ್ದೀನ್​ ಮತ್ತೆ ಜೈಲುಪಾಲಾಗಲಿದ್ದಾನೆ.

ಕೊಲೆ, ಕೊಲೆ ಯತ್ನ, ಅಪಹರಣ ಸೇರಿದಂತೆ 50 ಪ್ರಕರಣಗಳಲ್ಲಿ ಭಾಗಿಯಾಗಿರುವ ಶಹಾಬುದ್ದೀನ್’ಗೆ ಬಿಹಾರದ ಪಾಟ್ನಾ ಹೈಕೋರ್ಟ್​ ಜಾಮೀನು ನೀಡಿತ್ತು.

ಅದನ್ನು ಪ್ರಶ್ನಿಸಿ ಬಿಹಾರ ಸರ್ಕಾರ ಸುಪ್ರೀಂಕೋರ್ಟ್​ ಮೆಟ್ಟಿಲೇರಿತ್ತು.