ಪರಿಸರ ಹಾಗೂ ಜನರ ಹಿತದೃಷ್ಟಿಯಿಂದ ಸುಪ್ರೀಂಕೋರ್ಟ್ ಈ ತಿರ್ಮಾನ ತೆಗೆದುಕೊಂಡಿದೆ. ಸುಪ್ರೀಂ ಆದೇಶದಿಂದ ಕಾರು ತಯಾರಿಕಾ ಕಂಪನಿಗಳಿಗೆ ಹೊಡೆತ ಬಿದ್ದಿದೆ . ವ್ಯವಹಾರಕ್ಕಿಂತ ಜನರ ಆರೋಗ್ಯವೇ ಮುಖ್ಯ ಎಂದು ಸುಪ್ರೀಂಕೋರ್ಟ್​ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ನವದೆಹಲಿ (ಮಾ.29): ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಬಿ.ಎಸ್-4 (ಭಾರತ್ ಸ್ಟೇಜ್-4) ನಿಯಮಗಳನ್ನು ಜಾರಿಗೆ ತರವುದು ಬಹಳ ಮುಖ್ಯವೆಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್ , ಏ.1ರಿಂದ ಬಿ.ಎಸ್-III ಮಾದರಿಯ ವಾಹನಗಳ ಮಾರಾಟವನ್ನು ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿದೆ.

ಏ.1ರ ಬಳಿಕ ಬಿ.ಎಸ್-III ಮಾದರಿಯ ಯಾವುದೇ ವಾಹನಗಳನ್ನು ನೋಂದಾಯಿಸುವಂತಿಲ್ಲವೆಂದೂ, ಅದಕ್ಕಿಂತ ಮುಂಚೆ ಮಾರಲ್ಪಟ್ಟ ವಾಹನಗಳಿಗೆ ಹೊಸ ನಿಯಮ ಅನ್ವಯಿಸುವುದಿಲ್ಲವೆಂದು ಕೋರ್ಟ್ ಹೇಳಿದೆ.

ಪರಿಸರ ಹಾಗೂ ಜನರ ಹಿತದೃಷ್ಟಿಯಿಂದ ಸುಪ್ರೀಂಕೋರ್ಟ್ ಈ ತಿರ್ಮಾನ ತೆಗೆದುಕೊಂಡಿದೆ. ಸುಪ್ರೀಂ ಆದೇಶದಿಂದ ಕಾರು ತಯಾರಿಕಾ ಕಂಪನಿಗಳಿಗೆ ಹೊಡೆತ ಬಿದ್ದಿದೆ . ವ್ಯವಹಾರಕ್ಕಿಂತ ಜನರ ಆರೋಗ್ಯವೇ ಮುಖ್ಯ ಎಂದು ಸುಪ್ರೀಂಕೋರ್ಟ್​ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಬಿ.ಎಸ್-III ವಾಹನಗಳಿಂದ ಅತೀಯಾದ ವಾಯ್ಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಉಂಟಾಗುತ್ತಿರುವ ದೃಷ್ಟಿಯಿಂದ ಬಿಎಸ್ ವಾಹನಗಳಿಗೆ ತಡೆ ನೀಡಲಾಗಿದೆ. ಬಿ.ಎಸ್-III ವಾಹನಗಳಿಂದ ಶೇ.80 ರಷ್ಟು ಹೆಚ್ಚು ವಾಯ್ಯು ಮಾಲಿನ್ಯವಾಗುತ್ತದೆ ಎಂದು ಹೇಳಲಾಗಿದೆ.

ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಇದು ಪಬಹಳ ಮುಖ್ಯವಾಗಿದಯೆಂದು ಸುಪ್ರೀಂ ಅಭಿಪ್ರಾಯಪಟ್ಟಿದೆ.

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ಸ್ ಮ್ಯಾನುಫ್ಯಾಕ್ಚರ್ಸ್ (SIAM) ಪ್ರಕಾರ ಭಾರತದಲ್ಲಿ 8.2 ಲಕ್ಷ ಬಿ.ಎಸ್-III ಮಾದರಿಯ ವಾಹನಗಳ ದಾಸ್ತಾನು ಇದೆ. , ಅವುಗಳಲ್ಲಿ 6 ಲಕ್ಷಕ್ಕಿಂತಲೂ ಹೆಚ್ಚು ದ್ವಿಚಕ್ರ ವಾಹನಗಳಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು 12 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ.

ಸುಪ್ರೀಂ ಕೋರ್ಟ್ ಆದೇಶದಿಂದ ಸುಮಾರು 20 ಸಾವಿರ ವರ್ತಕರಿಗೆ ಭಾರೀ ನಷ್ಟವಾಗಲಿದೆ ಎಂದು ವರ್ತಕರ ಸಂಘವು ಹೇಳಿದೆ.