Asianet Suvarna News Asianet Suvarna News

'ಲವ್ ಜಿಹಾದ್' ತನಿಖೆ ನಡೆಸಲು ಎನ್”ಐಏಗೆ ಸುಪ್ರೀಂ ಸೂಚನೆ

ಹಿಂದೂ ಮಹಿಳೆಯೊಬ್ಬಳು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿರುವ ಪ್ರಕರಣವನ್ನು ತನಿಖಿಸಲು ಸುಪ್ರೀಂ ಕೋರ್ಟ್ ಇಂದು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಏ) ಸೂಚಿಸಿದೆ. ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಆರ್.ವಿ. ರವೀಂದ್ರನ್ ಎನ್ಐಏ ತನಿಖೆಯ ಮೇಲುಸ್ತುವಾರಿ ವಹಿಸಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Supreme Court asks NIA to probe Kerala Inter religious marriage case

ನವದೆಹಲಿ: ಹಿಂದೂ ಮಹಿಳೆಯೊಬ್ಬಳು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿರುವ ಪ್ರಕರಣವನ್ನು ತನಿಖಿಸಲು ಸುಪ್ರೀಂ ಕೋರ್ಟ್ ಇಂದು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಏ) ಸೂಚಿಸಿದೆ.

ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಆರ್.ವಿ. ರವೀಂದ್ರನ್ ಎನ್ಐಏ ತನಿಖೆಯ ಮೇಲುಸ್ತುವಾರಿ ವಹಿಸಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕೇರಳದ ಅಖಿಲಾ ಆಶೋಕನ್ ಇಸ್ಲಾಂ ಧರ್ಮಕ್ಕೆ ಮತಾತಂತಗೊಂಡು ಮುಸ್ಲಿಮ್ ವ್ಯಕ್ತಿಯನ್ನು ವರಿಸಿರುವ ಘಟನೆಯನ್ನು ಪ್ರತ್ಯೇಕವಾಗಿ ನೋಡಲಾಗದು. ಎಲ್ಲಾ ಮತಾಂತರಗಳ ಹಿಂದೇ ಇರುವ ವ್ಯಕ್ತಿಗಳು ಒಂದೇ ಆಗಿದ್ದಾರೆಂದು ಎನ್ಐಏ ಪರ ವಕೀಲ ಮಣಿಂದರ್ ಸಿಂಗ್ ಸುಪ್ರೀಂ ಕೋರ್ಟ್’ಗೆ ತಿಳಿಸಿದರು.

ಪ್ರಕರಣ ಕುರಿತು ಸುಪ್ರೀಂ ಕೋರ್ಟ್ ತನಿಖೆ ನಡೆಸಬಯಸಿದರೆ ನಮ್ಮದೇನೂ ಆಕ್ಷೇಪವಿಲ್ಲವೆಂದು ಕೇರಳ ಸರ್ಕಾರ ಈ ಹಿಂದೆ ಹೇಳಿತ್ತು.

ಎನ್’ಐಏ ಹಾಗೂ ಕೇರಳ ಪೊಲೀಸರಿಂದ ಮಾಹಿತಿ ಬಂದ ಬಳಿಕ, ಅಖಿಲಾ ಅಭಿಪ್ರಾಯ ತಿಳಿಯಲು ಆಕೆಯನ್ನು ಪ್ರಶ್ನಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ತನಿಖೆಯ ಮೆಲುಸ್ತುವಾರಿಯನ್ನು ಮಾಜಿ ಸುಪ್ರೀಂ ನ್ಯಾಯಾಧಿಶ ಕೆ.ಎಸ್. ರಾಧಾಕೃಷ್ಣನ್ ಅವರಿಗೆ ವಹಿಸಲು ಸುಪ್ರೀಂ ಬಯಸಿತ್ತು. ಆದರೆ ಅಖಿಲಾಳನ್ನು ವರಿಸಿರುವ ಶಫಿನ್ ಜಹಾನ್ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಶಫಿನ್ ಪರ ವಕೀಲರಾದ ಕಪಿಲ್ ಸಿಬಲ್ ಹಾಗೂ ಇಂದಿರಾ ಜೈಸಿಂಗ್ ಕೇರಳದ ಹೊರಗಿನವರನ್ನು ಮೇಲುಸ್ತುವಾರಿಗೆ ನೇಮಿಸಬೇಕೆಂದು ಮನವಿ ಮಾಡಿದ್ದರು.

ಶಫಿನ್ ಹಾಗೂ ಅಖಿಲಾ ಕಳೆದ ವರ್ಷ ಡಿಸೆಂಬರ್’ನಲ್ಲಿ ಅಂತರ್ಧರ್ಮೀಯ ವಿವಾಹವಾಗಿದ್ದರು. ಆದರೆ ಕೇರಳ ಹೈಕೋರ್ಟ್ ಆ ವಿವಾಹವನ್ನು ಅಸಿಂಧುಗೊಳಿಸಿದ್ದು, ಶಫೀನ್ ಸುಪ್ರೀಂ ಮೆಟ್ಟಿಲೇರಿದ್ದಾರೆ.

Follow Us:
Download App:
  • android
  • ios