ಚುನಾವಣೆಗಳಲ್ಲಿ ಜಾತ್ಯಾತೀತ ವಾದವೇ ಮುಂಚೂಣಿಯಲ್ಲಿರಬೇಕು ಎಂದಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಟಿ. ಎಸ್ ಠಾಕೂರ್ ನೇತೃತ್ವದ ಸಾಂವಿಧಾನಿಕ ಪೀಠ ಜಾತ್ಯಾತೀತ ವಾದವನ್ನು ಎತ್ತಿ ಹಿಡಿದಿದೆ. ಸದ್ಯದಲ್ಲೇ ಉತ್ತರ ಪ್ರದೇಶ ಚುನಾವಣೆ ಇರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್'ನ ಈ ತೀರ್ಪು ಸಾಕಷ್ಟು ಮಹತ್ವ ಪಡೆದಿದೆ.

ನವದೆಹಲಿ (ಜ.02): ಜಾತಿ, ಧರ್ಮ ಆಧಾರದ ಮೇಲೆ ಮತಯಾಚಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ. ಉತ್ತರಪ್ರದೇಶ ಚುನಾವಣೆ ಮುನ್ನವೇ ತನ್ನ ತೀರ್ಪನ್ನು ಹೊರಹಾಕಿರುವ ಸರ್ವೋಚ್ಛ ನ್ಯಾಯಾಲಯ ಈ ಮೂಲಕ ರಾಜಕೀಯ ಪಕ್ಷಗಳಿಗೆ ಬಹುದೊಡ್ಡ ಶಾಕ್ ನೀಡಿದೆ.

ಚುನಾವಣೆಗಳಲ್ಲಿ ಜಾತ್ಯಾತೀತ ವಾದವೇ ಮುಂಚೂಣಿಯಲ್ಲಿರಬೇಕು ಎಂದಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಟಿ. ಎಸ್ ಠಾಕೂರ್ ನೇತೃತ್ವದ ಸಾಂವಿಧಾನಿಕ ಪೀಠ ಜಾತ್ಯಾತೀತ ವಾದವನ್ನು ಎತ್ತಿ ಹಿಡಿದಿದೆ. ಸದ್ಯದಲ್ಲೇ ಉತ್ತರ ಪ್ರದೇಶ ಚುನಾವಣೆ ಇರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್'ನ ಈ ತೀರ್ಪು ಸಾಕಷ್ಟು ಮಹತ್ವ ಪಡೆದಿದೆ.

ಜಾತಿ, ಧರ್ಮ ಆಧಾರದ ಮೇಲೆ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಜಾತಿ ಧರ್ಮ ಆಧಾರದ ಮೇಲೆ ಮತ ಯಾಚನೆ ಮಾಡಬಾರದು ಎಂದು ಸುಪ್ರೀಂ ಸೂಚನೆ ನೀಡಿದೆ. ಅಲ್ಲದೆ ಚುನಾವಣೆ ಸಂದರ್ಭದಲ್ಲಿ ಯಾವುದೇ ಧಾರ್ಮಿಕ ಸಭೆಗಳನ್ನು ನಡೆಸದಿರಲು ಆದೇಶ ನೀಡಿದೆ.