ತಮ್ಮ ಮದುವೆಯ 25 ನೇ ವಾರ್ಷಿಕೋತ್ಸವವನ್ನು ಬಳ್ಳಾರಿಯಲ್ಲಿ ಆಚರಣೆ ಮಾಡಿಕೊಳ್ಳಲು ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಬಳ್ಳಾರಿ (ಮೇ. 29): ತಮ್ಮ ಮದುವೆಯ ೨೫ನೇ ವಾರ್ಷಿಕೋತ್ಸವವನ್ನು ಬಳ್ಳಾರಿಯಲ್ಲಿ ಆಚರಣೆ ಮಾಡಿಕೊಳ್ಳಲು ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಹುಟ್ಟೂರು ಬಳ್ಳಾರಿಗೆ ಬರಲು ಹಾತೊರೆಯುತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ, ಮದುವೆ ವಾರ್ಷಿಕೋತ್ಸವವನ್ನು ಗೆಳೆಯರು ಹಾಗೂ ಬಂಧು-ಬಳಗದವರೊಂದಿಗೆ ಆಚರಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ರೆಡ್ಡಿಯ ಮನವಿ ಪುರಸ್ಕರಿಸಿರುವ ನ್ಯಾಯಾಲಯ, ಜೂ.೧ರಿಂದ ನಾಲ್ಕು ದಿನಗಳ ಕಾಲ ಬಳ್ಳಾರಿಯಲ್ಲಿರಲು ಅವಕಾಶ ನೀಡಿದೆ. ರೆಡ್ಡಿ ಆಗಮನ ವಿಚಾರವನ್ನು ಸಹೋದರ ಹಾಗೂ ಕೆಎಂಎಫ್ ಮಾಜಿ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ಖಚಿತ ಪಡಿಸಿದ್ದಾರೆ. ಮೇ 31 ರ ಮಧ್ಯರಾತ್ರಿ ರೆಡ್ಡಿ ನಗರಕ್ಕೆ ಬರುವ ಸಾಧ್ಯತೆ ಇದೆ. ಇದೇ ವೇಳೆ ತುಂಗಭದ್ರಾ ಜಲಾಶಯದಲ್ಲಿ ಹೂಳೆತ್ತುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರೈತರನ್ನು ಭೇಟಿ ಮಾಡಿ, ಅವರ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.