ಕಾವೇರಿ ನ್ಯಾಯಾಧಿಕರಣದ ಐತೀರ್ಪು ಪ್ರಶ್ನಿಸಿ 3 ರಾಜ್ಯಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ಸಿಂಧುತ್ವದ ಬಗ್ಗೆ ವಾದ- ಪ್ರತಿವಾದ ಅಂತ್ಯಗೊಂಡಿದ್ದು, ಅ.24ರೊಳಗೆ ಹೆಚ್ಚುವರಿ ಲಿಖಿತ ಅಫಿಡವಿಟ್ ಸಲ್ಲಿಸಲು ಸೂಚನೆ ನೀಡಿದ ಕೋರ್ಟ್, ಮುಂದಿನ ಆದೇಶದವರೆಗೂ ದಿನಕ್ಕೆ 2 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಆದೇಶಿಸಿದೆ.
ನವದೆಹಲಿ(ಅ.19): ಕರ್ನಾಟಕದಲ್ಲಿ ಕುಡಿಯುವ ನೀರಿಗೇ ತೊಂದರೆ ಇದ್ದರೂ ಪದೇ ಪದೇ ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶಿಸುತ್ತಿದೆ. ಇವತ್ತು ಸಹ ಮುಂದಿನ ಆದೇಶ ಬರುವವರೆಗೂ 2 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕಕ್ಕೆ ಸೂಚಿಸಿದೆ.