ಬೆಂಗಳೂರು[ಜು.23]: ರಾಜ್ಯದ ಮೈತ್ರಿ ಸರ್ಕಾರಕ್ಕೆ ಸೋಮವಾರ ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಯಾಚನೆಗೆ ಸೂಚಿಸುವಂತೆ ಪಕ್ಷೇತರ ಶಾಸಕರಾದ ನಾಗೇಶ್‌ ಹಾಗೂ ಕೆಪಿಜೆಪಿಯ ಶಂಕರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಮುಖ್ಯನ್ಯಾಯಮೂರ್ತಿ ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದಾರೆ. 

ಪಕ್ಷೇತರ ಶಾಸಕರಾದ ನಾಗೇಶ್‌ ಹಾಗೂ ಕೆಪಿಜೆಪಿಯ ಶಂಕರ್‌ ಪರ ವಕೀಲ ಮುಕುಲ್ ರೋಹ್ಟಗಿ ಹಾಗೂ ಸ್ಪೀಕರ್ ಪರವಾಗಿ ಅಭಿಷೇಕ್ ಮನು ಸಿಂಘ್ವಿಯವರು ಸುಪ್ರೀಂನಲ್ಲಿ ವಾದ-ಪ್ರತಿವಾದ ಮಂಡಿಸಿದರು. ಅಲ್ಲದೇ ಇಂದು, ಮಂಗಳವಾರ ಸಂಜೆ 6 ಗಂಟೆಯೊಳಗಾಗಿ ವಿಶ್ವಾಸಮತಯಾಚನೆ ಪ್ರಕ್ರಿಯೆ ಮುಗಿಸುವುದಾಗಿ ಸ್ಪೀಕರ್ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ  ವಾದಿಸಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಾದ ಪ್ರತಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ಪೀಠ ಪಕ್ಷೇತರ ಶಾಸಕರ ಈ ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಸದ್ಯ ರಮೇಶ್ ಕುಮಾರ್ ಸುಪ್ರೀಂನಲ್ಲಿ ಹೇಳಿದಂತೆ ವಿಶ್ವಾಸಮತ ಪ್ರಕ್ರಿಯೆ ಇಂದೇ ಮುಗಿಸುತ್ತಾರಾ? ಅಥವಾ ನಾಳೆ ನಡೆಯಲಿರುವ ಸುಪ್ರೀಂ ತೀರ್ಪಿಗೆ ಕಾಯುತ್ತಾರಾ? ಕಾದು ನೋಡಬೇಕಷ್ಟೇ

ಸುವರ್ಣ ನ್ಯೂಸ್ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ // https://bit.ly/32JJ0DE // ಕ್ಲಿಕ್ ಮಾಡಿ