Asianet Suvarna News Asianet Suvarna News

ಇಂದು ಸೂಪರ್‌ ಮೂನ್‌ ಡೇ! ದೊಡ್ಡದಾಗಿ ಕಾಣಲಿದ್ದಾನೆ ಚಂದಾಮಾಮ

ಇಂದು ಚಂದಿರ ಹೆಚ್ಚು ದೊಡ್ಡದಾಗಿ ಹಾಗೂ ಕಾಂತಿಯುತವಾಗಿ ಕಂಗೊಳಿಸಲಿದ್ದಾನೆ.

Supermoon to brighten up skies on Sunday night

ಬೆಂಗಳೂರು (ಡಿ.03): ಇಂದು ಚಂದಿರ ಹೆಚ್ಚು ದೊಡ್ಡದಾಗಿ ಹಾಗೂ ಕಾಂತಿಯುತವಾಗಿ ಕಂಗೊಳಿಸಲಿದ್ದಾನೆ.

ಚಂದಮಾಮ ಭಾನುವಾರ ಇತರ ದಿನಗಳಿಗಿಂತ  ಶೇ.14ರಷ್ಟು ದೊಡ್ಡದಾಗಿ ಹಾಗೂ ಶೇ.20ರಷ್ಟು ಹೆಚ್ಚು ಕಾಂತಿಯುತವಾಗಿ ಹೊಳೆಯಲಿದ್ದಾನೆ. ಈ ಹುಣ್ಣಿಮೆಯಂದು ಚಂದ್ರ ಭೂಮಿಗೆ ಸುಮಾರು 30 ಸಾವಿರ ಕಿ.ಮೀ.ನಷ್ಟು ಹತ್ತಿರ ಬರಲಿದ್ದಾನೆ. ಹೀಗಾಗಿ ಈ ಹಿಂದಿನ ಹುಣ್ಣಿಮೆ ದಿನಗಳಿಗಿಂತ ಹೆಚ್ಚು ಪ್ರಕಾಶಮಾನವಾಗಿ ಬೆಳಗುವ ಚಂದಿರನನ್ನು ಕಾಣುವ ಅಪರೂಪದ ಖಗೋಳ ಕೌತುಕ ಭಾನುವಾರ ನಡೆಯಲಿದೆ. ಈ ವರ್ಷದಲ್ಲಿ ಇಷ್ಟು ದೊಡ್ಡ ಹುಣ್ಣಿಮೆಯ ಚಂದಿರ ಕಂಡಿಲ್ಲ. ಎಲ್ಲ ಹುಣ್ಣಿಮೆಯಲ್ಲಿ ಚಂದ್ರ ಒಂದೇ ಗಾತ್ರದಲ್ಲಿ ಕಾಣುವುದಿಲ್ಲ. ಪ್ರಸ್ತುತ ಚಂದ್ರನು ಭೂಮಿಗಿಂತ ಸರಾಸರಿ 3,84,000 ಕಿ.ಮೀ. ದೂರದಲ್ಲಿದ್ದಾನೆ. 2017 ರ ಸಾಲಿನಲ್ಲಿ ಇಂದು ಮಾತ್ರ ಚಂದಿರ ದೊಡ್ಡದಾಗಿ ಕಾಣಲಿದ್ದಾನೆ.

Latest Videos
Follow Us:
Download App:
  • android
  • ios