ಭಾರಿ ಚಂಡಮಾರುತದ ಮುನ್ನೆಚ್ಚರಿಕೆ

First Published 31, Mar 2018, 4:04 PM IST
Super typhoon may submerge  Tokyo
Highlights

ಜಪಾನ್’ನ ಟೋಕಿಯೋ ನಗರಕ್ಕೆ ಚಂಡಮಾರುತ ಅಪ್ಪಳಿಸುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಇದರಿಂದ ನಾಲ್ಕು ಮಿಲಿಯನ್’ಗೂ ಅಧಿಕ ಮಂದಿ ತೊಂದರೆ ಈಡಾಗುವ ಸಾಧ್ಯತೆಗಳಿದೆ.

ಟೋಕಿಯೋ : ಜಪಾನ್’ನ ಟೋಕಿಯೋ ನಗರಕ್ಕೆ ಚಂಡಮಾರುತ ಅಪ್ಪಳಿಸುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಇದರಿಂದ ನಾಲ್ಕು ಮಿಲಿಯನ್’ಗೂ ಅಧಿಕ ಮಂದಿ ತೊಂದರೆ ಈಡಾಗುವ ಸಾಧ್ಯತೆಗಳಿದೆ.

ಅತ್ಯಧಿಕ ಪ್ರಮಾಣದಲ್ಲಿ ಬಿರುಗಾಳಿ ಬೀಸಲಿದ್ದು, ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ಮುನ್ನೆಚ್ಚರಿಕೆಯನ್ನು ರವಾನಿಸಿವೆ. ಜನರು ಸೂಕ್ತ ಪ್ರಮಾಣದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ. ಅಲ್ಲದೇ ಶೇ.33ರಷ್ಟು ಪ್ರದೇಶವು ನೀರಿನಲ್ಲಿ ಮುಳುಗುವ ಸಾಧ್ಯತೆ ಇದೆ ಎಂದೂ ಅಧ್ಯಯನಗಳು ಹೇಳಿವೆ.

 ಜಾಗತಿಕವಾಗಿ ಈಗಾಗಲೇ ಅನೇಕ ಪ್ರದೇಶಗಳ್ಲಲಿ ಚಂಡಮಾರುತ ಅಪ್ಪಳಿಸುತ್ತಿದ್ದು, ಟೋಕಿಯೋ ನಗರಾಡಳಿತ ಈಗ  ಈ ಬಗ್ಗೆ ತನ್ನ ಜನರಿಗೆ ಮುನ್ನೆಚ್ಚರಿಕೆಯನ್ನು ನೀಡಿದೆ.  ಹೆಚ್ಚು ಬಿರುಗಾಳಿ,  ಭೂ ಕಂಪನ ಸಂಭವಿಸುವ ಸಾಧ್ಯತೆಗಳಿವ ಎಂದೂ ಕೂಡ ಹೇಳಲಾಗಿದೆ.

loader