ಚೆನ್ನೈ[ಮಾ. 10]  ತಮಿಳುನಾಡಿನ ಉಪಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.

ತಮಿಳುನಾಡಿನ 21 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ. ಇನ್ನೊಂದು ತಿಂಗಳಿನ ಅವಧಿಯಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆ ಇದೆ.

ಸೌಂದರ್ಯ ರಜನೀಕಾಂತ್ ಹನಿಮೂನ್ ಫೋಟೋ ವೈರಲ್

ಉಪಚುನಾವಣೆಗಳನ್ನು ನಾನು ಕೇಂದ್ರೀಕರಣ ಮಾಡಿಕೊಂಡಿಲ್ಲ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನನ್ನ ಪಕ್ಷ  ಎಲ್ಲ ಕಡೆ ಸ್ಪರ್ಧೆ ಮಾಡಲಿದೆ ಎಂದಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಲೋಕ ಸಮರಕ್ಕೂ ದಿನಾಂಕ ಪ್ರಕಟ ಮಾಡಲಿದ್ದು ತಮಿಳುನಾಡಿನ ರಾಜಕಾರಣ ಕೇಂದ್ರದಲ್ಲಿ ಆಡಳಿತ ಹಿಡಿಯುವ ಪಕ್ಷಕ್ಕೆ ಬಹಳ ಪ್ರಮುಖವಾಗುತ್ತದೆ.

2017ರ ಡಿಸೆಂಬರ್‌ 31ರಂದು ರಜನಿ ಅವರು ರಾಜಕೀಯ ಪ್ರವೇಶ ಘೋಷಣೆ ಮಾಡಿ, ರಜನಿ ಮಕ್ಕಳ್‌ ಮಂದ್ರಂ ಪಕ್ಷದ ಘೋಷಣೆ ಮಾಡಿದ್ದರು. ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಎಂಬ ನಿರೀಕ್ಷೆಯನ್ನು ಅವರ ಅಭಿಮಾನಿಗಳು ಹೊಂದಿದ್ದರು.