ರೆಬೆಲ್‌ ಸ್ಟಾರ್‌ ಅಂಬರೀಶ್‌ ಹಾಗೂ ಸುಮಲತಾ ದಂಪತಿ ಮುಖ್ಯ ಅತಿಥಿಗಳಾಗಿದ್ದರು. ಅಲ್ಲದೇ ‘ಸೂಪರ್‌ ಜೋಡಿ ಸೀಸನ್‌ 1'ರ ವಿನ್ನರ್‌ ವಿನಯ್‌ ಗೌಡ ಹಾಗೂ ನಿಶ್ಚಿತ ಗೌಡ ಆಗಮಿಸಿದ್ದರು. ‘ ಹ್ಯಾಪಿ ನ್ಯೂ ಈಯರ್‌' ಚಿತ್ರ ತಂಡದೊಂದಿಗೆ ಮೋಹಕ ನಟಿ ಶ್ರುತಿ ಹರಿಹರನ್‌, ಐಂದ್ರಿತಾ ರೇ, ಹರ್ಷಿಕಾ ಪೂಣಚ್ಚ ಜನಪ್ರಿಯ ಗೀತೆಗಳಿಗೆ ಸಖತ್‌ ಹೆಜ್ಜೆ ಹಾಕಿದರು.

ಸ್ಟಾರ್‌ ಸುವರ್ಣದ ರಿಯಾಲಿಟಿ ಶೋ ‘ಸೂಪರ್‌ ಜೋಡಿ' ಮುಕ್ತಾಯದ ಘಟ್ಟತಲುಪಿದೆ. ಕರ್ನಾಟಕದ ಸೂಪರ್‌ ಜೋಡಿ ಯಾರು ಎನ್ನುವ ವೀಕ್ಷಕರ ಕುತೂಹಲಕ್ಕೆ ಇದೇ ಏಪ್ರಿಲ್‌ 23ಕ್ಕೆ ತೆರೆ ಬೀಳುತ್ತಿದೆ. ಅದ್ಧೂರಿ ವೇದಿಕೆಯಲ್ಲಿ ನಡೆದ ಸೂಪರ್‌ ಜೋಡಿಯ ಗ್ರ್ಯಾಂಡ್‌ ಫಿನಾ­ಲೆಯ ದೃಶ್ಯಾವಳಿ ವರ್ಣ ರಂಜಿತವಾಗಿತ್ತು.

ರೆಬೆಲ್‌ ಸ್ಟಾರ್‌ ಅಂಬರೀಶ್‌ ಹಾಗೂ ಸುಮಲತಾ ದಂಪತಿ ಮುಖ್ಯ ಅತಿಥಿಗಳಾಗಿದ್ದರು. ಅಲ್ಲದೇ ‘ಸೂಪರ್‌ ಜೋಡಿ ಸೀಸನ್‌ 1'ರ ವಿನ್ನರ್‌ ವಿನಯ್‌ ಗೌಡ ಹಾಗೂ ನಿಶ್ಚಿತ ಗೌಡ ಆಗಮಿಸಿದ್ದರು. ‘ ಹ್ಯಾಪಿ ನ್ಯೂ ಈಯರ್‌' ಚಿತ್ರ ತಂಡದೊಂದಿಗೆ ಮೋಹಕ ನಟಿ ಶ್ರುತಿ ಹರಿಹರನ್‌, ಐಂದ್ರಿತಾ ರೇ, ಹರ್ಷಿಕಾ ಪೂಣಚ್ಚ ಜನಪ್ರಿಯ ಗೀತೆಗಳಿಗೆ ಸಖತ್‌ ಹೆಜ್ಜೆ ಹಾಕಿದರು.

ನಟ ರಘು ಮುಖರ್ಜಿ ಹಾಗೂ ಅನುಪ್ರಭಾಕರ್‌ ತಮ್ಮ ಪ್ರೀತಿಯ ಗುಟ್ಟನ್ನು ಬಿಚ್ಚಿಟ್ಟರು. ‘ಸೂಪರ್‌ ಜೋಡಿ' ಟೈಟಲ್‌ ಗೆದ್ದ ಜೋಡಿಗೆ ಹತ್ತು ಲಕ್ಷ ಬಹುಮಾನ ದೊರೆಯಿತು. ಗ್ರ್ಯಾಂಡ್‌ ಫಿನಾಲೆ ಸಖತ್‌ ಥ್ರಿಲ್ಲಿಂಗ್‌ ಆಗಿದೆ. ಏಪ್ರಿಲ್‌ 23 ರಂದು ಸಂಜೆ 7 ಗಂಟೆಗೆ ಸ್ಟಾರ್‌ ಸುವರ್ಣದಲ್ಲಿ ಮೂಡಿಬರಲಿದೆ. ಈ ಸಂಚಿಕೆ ಏ. 23 ರಂದು ಸಂಜೆ 7ಕ್ಕೆ ಪ್ರಸಾರವಾಗಲಿದೆ.