ಮಂಗಳೂರು ಮೂಲದ ವೀರಪ್ಪ ಅವರು ಮುಂಬೈಗೆ ವಲಸೆ ಹೋಗಿ ಹೋಟೆಲ್ ಉದ್ಯಮಿಯಾಗಿದ್ದರು.

ಮುಂಬೈ(ಮಾ.01): ಬಾಲಿವುಡ್ ನಟ ಸುನಿಲ್ ಶೆಟ್ಟಿತಂದೆ ವೀರಪ್ಪ ಶೆಟ್ಟಿ(93) ಇಂದು ನಿಧನರಾಗಿದ್ದಾರೆ. ಮಂಗಳೂರು ಮೂಲದ ವೀರಪ್ಪ ಅವರು ಮುಂಬೈಗೆ ವಲಸೆ ಹೋಗಿ ಹೋಟೆಲ್ ಉದ್ಯಮಿಯಾಗಿದ್ದರು.

ಅನಾರೋಗ್ಯದ ಕಾರಣ ವೀರಪ್ಪ ಅವರನ್ನು ಮುಂಬೈನ ಬ್ರೋಚ್ ಕ್ಯಾಂಡಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 1.30ರ ಸಮಯದಲ್ಲಿ ಮೃತಪಟ್ಟಿದ್ದಾರೆ. ಪತ್ನಿ , ಪುತ್ರಿ ಹಾಗೂ ಪುತ್ರ ಸುನಿಲ್ ಶೆಟ್ಟಿಯನ್ನು ಅಗಲಿದ್ದಾರೆ.