ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ರವಿ ಬೆಳೆಗೆರೆ ಸುಪಾರಿ ಕೊಟ್ಟಿರುವ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ಈ ಬಗ್ಗೆ ಸುವರ್ಣ ನ್ಯೂಸ್'ಗೆ ಪ್ರತಿಕ್ರಿಯಿಸಿರುವ ಸುನೀಲ್ ಹೆಗ್ಗರವಳ್ಳಿ, ಈ ವಿಷಯ ಕೇಳಿ ನನಗೂ ಶಾಕ್ ಆಗಿದೆ. ಯಾಕೆ ಈ ರೀತಿಯ ಭಾವನೆ ಬಂತು ಗೊತ್ತಿಲ್ಲ. ಕೊಲೆ ಮಾಡಲು ಸುಪಾರಿ ಕೊಡುತ್ತಾರೆ ಎಂದು ಊಹಿಸಿರಲಿಲ್ಲ. ಹಿರಿಯ ಅಧಿಕಾರಿಗಳು ಕರೆಸಿ ವಿಷಯ ತಿಳಿಸಿದರು ಎಂದು ಹೇಳಿದ್ದಾರೆ.
ಬೆಂಗಳೂರು (ಡಿ.08): ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ರವಿ ಬೆಳೆಗೆರೆ ಸುಪಾರಿ ಕೊಟ್ಟಿರುವ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ಈ ಬಗ್ಗೆ ಸುವರ್ಣ ನ್ಯೂಸ್'ಗೆ ಪ್ರತಿಕ್ರಿಯಿಸಿರುವ ಸುನೀಲ್ ಹೆಗ್ಗರವಳ್ಳಿ, ಈ ವಿಷಯ ಕೇಳಿ ನನಗೂ ಶಾಕ್ ಆಗಿದೆ. ಯಾಕೆ ಈ ರೀತಿಯ ಭಾವನೆ ಬಂತು ಗೊತ್ತಿಲ್ಲ. ಕೊಲೆ ಮಾಡಲು ಸುಪಾರಿ ಕೊಡುತ್ತಾರೆ ಎಂದು ಊಹಿಸಿರಲಿಲ್ಲ. ಹಿರಿಯ ಅಧಿಕಾರಿಗಳು ಕರೆಸಿ ವಿಷಯ ತಿಳಿಸಿದರು ಎಂದು ಹೇಳಿದ್ದಾರೆ.
ನೀನು ಒಳ್ಳೆಯ ಬರಹಗಾರ. ನಿನ್ನಂತವರು ನನಗೆ ಬೇಕು ಎಂದು ಮೂರು ವರ್ಷಗಳ ಹಿಂದೆ ಆಫೀಸ್ಗೆ ಹೋದಾಗ ಹೇಳಿದ್ದರು. ಪತ್ರಿಕೆ ನಡೆಸುವವರು ಇಲ್ಲ, ನಿನ್ನಂತವರು ನನಗೆ ಬೇಕು ಎಂದು ಕರೆಯುತ್ತಿದ್ದರು. ನಾನು ಹಾಯ್ ಬೆಂಗಳೂರು ಪತ್ರಿಕೆ ಬಿಟ್ಟಾಗ ಮತ್ತೆ ಕರೆದಿದ್ದರು. ಇದರಿಂದ ಹೋಗಬೇಕೆಂದು ನಿರ್ಧಾರ ಮಾಡಿ ಮತ್ತೆ ಹೋದೆ ಆದರೆ ಅಲ್ಲಿ ಯಾರು ಇರಲಿಲ್ಲ ಎಂದು ಸುನೀಲ್ ಹೆಗ್ಗರವಳ್ಳಿ ಹೇಳಿದ್ದರು.
