ಕಾಂಗ್ರೆಸ್ ಮುಖಂಡ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ 2014ರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಪಂಚತಾರಾ ಲೀಲಾ ಪ್ಯಾಲೇಸ್ ಹೋಟೆಲ್ ಕೋಣೆಯನ್ನು ದೆಹಲಿಯ ಕೋರ್ಟ್‌'ವೊಂದು ಸೋಮವಾರ ಬೀಗ ಮುದ್ರೆಯಿಂದ ತೆರವುಗೊಳಿಸಿದೆ.
ನವದೆಹಲಿ(ಅ.17): ಕಾಂಗ್ರೆಸ್ ಮುಖಂಡ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ 2014ರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಪಂಚತಾರಾ ಲೀಲಾ ಪ್ಯಾಲೇಸ್ ಹೋಟೆಲ್ ಕೋಣೆಯನ್ನು ದೆಹಲಿಯ ಕೋರ್ಟ್'ವೊಂದು ಸೋಮವಾರ ಬೀಗ ಮುದ್ರೆಯಿಂದ ತೆರವುಗೊಳಿಸಿದೆ.
ವಿಧಿವಿಜ್ಞಾನ ಪ್ರಯೋಗಾಲ ಯದ ವರದಿಯನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಹೋಟೆಲ್'ನ ಕೋಣೆಗೆ ಬೀಗ ಮುದ್ರೆಹಾಕಿದ್ದನ್ನು 6 ದಿನಗಳ ಒಳಗಾಗಿ ತೆಗೆಯವಂತೆ ಕೋರ್ಟ್ ಪೊಲೀಸರಿಗೆ ಅ.10ರಂದು ಸೂಚಿಸಿತ್ತು. ಸುನಂದಾ 2014ರ ಜ.17ರ ರಾತ್ರಿ ಸಾವನ್ನಪ್ಪಿದ್ದರು. ಬಳಿಕ ತನಿಖೆ ಕಾರಣ ಕೋಣೆಗೆ ಬೀಗ ಹಾಕಲಾಗಿತ್ತು
