ರಾಜಕಾರಣದಿಂದ ಬೇಸತ್ತು ಧರ್ಮಸ್ಥಳದಲ್ಲಿ ದಂಪತಿಗಳ ಆತ್ಮಹತ್ಯೆ..!

First Published 9, May 2018, 12:50 AM IST
Suicide Take Place in Dharmasthala
Highlights

ಮೃತ ಮೃತ್ಯುಂಜಯ ಬ್ಯಾಡಗಿ ಕ್ಷೇತ್ರದ ಕಾಂಗ್ರೆಸ್ ಆಭ್ಯರ್ಥಿ ಎಸ್.ಆರ್.ಪಾಟೀಲ್ ಸೋದರ ಸಂಬಂಧಿಯಾಗಿದ್ದು, ಕಳೆದ ವಾರ ಸಿಎಂ ಸಿದ್ದರಾಮಯ್ಯ ಇವರ ಮನೆಗೆ ಬೇಟಿ ನೀಡಿದ್ದರು. 

ಮಂಗಳೂರು(ಮೇ.08]: ಪ್ರಜಾಪ್ರಭುತ್ವ ವ್ಯವಸ್ಥೆ ಹದಗೆಟ್ಟಿರುವ ಹಿನ್ನಲೆ ಮತ್ತು ರಾಜಕೀಯ ಹಣ, ಹೆಂಡಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆ‌ ಮಾಡಿಕೊಂಡಿರುವ ಘಟನೆ ಧರ್ಮಸ್ಥಳದ ಲಾಡ್ಜ್’ನಲ್ಲಿ ನಡೆದಿದೆ.
ಹಾವೇರಿ ಜಿಲ್ಲೆ ಬ್ಯಾಡಗಿ ಮೂಲದ ದಂಪತಿ ಮೃತ್ಯುಂಜಯ (60) ಹಾಗೂ ನೇತ್ರಾವತಿ (54) ನೇಣಿಗೆ ಶರಣಾದ ಮೃತ ದುರ್ದೈವಿಗಳಾಗಿದ್ದಾರೆ. ರಾಜಕೀಯದಲ್ಲಿ ಹಣ, ಹೆಂಡದಿಂದ ಕೀಳುಮಟ್ಟಕ್ಕೆ ಇಳಿದಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗಿದೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಳಾದ ಪ್ರಜಾಪ್ರಭುತ್ವವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ನೋಡಿಕೊಳ್ಳಬೇಕು. ಅವರು ಸರಿ ದಾರಿಗೆ ತರುತ್ತಾರೆ ಅಂತಾ ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್’ನಲ್ಲಿ ಈ ದಂಪತಿಗಳು ಉಲ್ಲೇಖಿಸಿದ್ದಾರೆ.
ಮೃತ ಮೃತ್ಯುಂಜಯ ಬ್ಯಾಡಗಿ ಕ್ಷೇತ್ರದ ಕಾಂಗ್ರೆಸ್ ಆಭ್ಯರ್ಥಿ ಎಸ್.ಆರ್.ಪಾಟೀಲ್ ಸೋದರ ಸಂಬಂಧಿಯಾಗಿದ್ದು, ಕಳೆದ ವಾರ ಸಿಎಂ ಸಿದ್ದರಾಮಯ್ಯ ಇವರ ಮನೆಗೆ ಬೇಟಿ ನೀಡಿದ್ದರು. 
ಈ ಆತ್ಮಹತ್ಯೆ ಕುರಿತಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loader