ಅತ್ಯಧಿಕ ಪ್ರಮಾಣದಲ್ಲಿ ಕಬ್ಬನ್ನು ಬೆಳೆಯುವುದರಿಂದ ಅತ್ಯಧಿಕ ಸಕ್ಕರೆ ಉತ್ಪಾದನೆಯಾಗುತ್ತದೆ. ಸಕ್ಕರೆ ಹೆಚ್ಚು ಉತ್ಪಾದನೆ ಮಾಡುವುದರಿಂದ ಸೇವನೆಯ ಪ್ರಮಾಣವೂ ಹೆಚ್ಚುತ್ತದೆ. ಇದರಿಂದ ಮಧುಮೇಹ ಬರುತ್ತದೆ.  ಆದ್ದರಿಂದ ಕಬ್ಬಿನ ಬದಲಾಗಿ ಬೇರೆ ಬೆಳೆ ಬೆಳೆಯಿರಿ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

ಲಕ್ನೋ :  ಅತ್ಯಧಿಕ ಪ್ರಮಾಣದಲ್ಲಿ ಕಬ್ಬು ಬೆಳೆಯುವುದು ಸಕ್ಕರೆ ಕಾಯಿಲೆಗೆ ಕಾರಣ. ಆದ್ದರಿಂದ ಅದಕ್ಕೆ ಬದಲಾಗಿ ಬೇರೆ ಬೆಳೆ ಬೆಳೆಯಿರಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಅತ್ಯಧಿಕ ಕಬ್ಬು ಬೆಳೆಯುವುದು ಅತ್ಯಧಿಕ ಸಕ್ಕರೆ ಉತ್ಪಾದನೆಗೆ ಕಾರಣವಾಗುತ್ತದೆ. ಅತ್ಯಧಿಕ ಉತ್ಪಾದನೆಯಿದ್ದಾಗ ಸೇವನೆಯೂ ಕೂಡ ಹೆಚ್ಚಾಗುತ್ತದೆ. ಇದು ಸಕ್ಕರೆ ಕಾಯಿಲೆಗೆ ದಾರಿಯಾಗುತ್ತದೆ ಎಂದು ದಿಲ್ಲಿ - ಸಹರಾನ್ ಹೆದ್ದಾರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಆದ್ದರಿಂದ ಇದೀಗ ಕಬ್ಬನ್ನು ಬೆಳೆಯುವ ಬದಲಾಗಿ ರೈತರು ಬೇರೆ ಬೆಳೆಯಲು ಆರಂಭಿಸಲು ಸಲಹೆ ನೀಡಿದ್ದಾರೆ. 

ಇನ್ನು ಇದೇ ವೇಳೆ ಸಕ್ಕರೆ ಕಾರ್ಖಾನೆ ಮಾಲೀಕರಿಗೂ ಕೂಡ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದು ಬಾಕಿ ಹಣವನ್ನು ಅಕ್ಟೋಬರ್ 15ರ ಒಳಗೆ ಒಳಗೆ ಪಾವತಿ ಮಾಡಬೇಕು. ಬಡವರನ್ನು ಮುಖ್ಯವಾಹಿನಿಗೆ ತರುವುದು ನಮ್ಮ ಪ್ರಮುಖ ಗುರಿಯಾಗಿದೆ. ಆದರೆ ಸಕ್ಕರೆ ಕಾರ್ಖಾನೆಗಳು ಹಣ ಪಾವತಿ ಮಾಡದಿದ್ದಲ್ಲಿ ಕಷ್ಟ ಸಾಧ್ಯವಾಗುತ್ತದೆ. ಒಂದು ವೇಳೆ ಹಣ ಪಾವತಿ ಮಾಡದಿದ್ದಲ್ಲಿ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

Scroll to load tweet…

ಉತ್ತರ ಪ್ರದೇಶವು ದೇಶದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸಕ್ಕರೆಯನ್ನು ಉತ್ಪಾದನೆ ಮಾಡುತ್ತದೆ. ಅಕ್ಟೋಬರ್ ವೇಳೆ ಸಕ್ಕರೆ ತೆಗೆಯುವ ಕಾರ್ಯ ಆರಂಭವಾಗುತ್ತದೆ. ನವೆಂಬರ್ ತಿಂಗಳವರೆಗೂ ಕೂಡ ಈ ಕಾರ್ಯ ಮುಂದುವರಿಯುತ್ತದೆ. 2017 - 18ರ ಅವಧಿಯಲ್ಲಿ ದೇಶದ ಸಕ್ಕರೆ ಉತ್ಪಾದನೆಯ ಒಟ್ಟು ಶೇ.38ರಷ್ಟು ಸಕ್ಕರೆಯನ್ನು ಉತ್ತರ ಪ್ರದೇಶದಲ್ಲಿ ಉತ್ಪಾದನೆ ಮಾಡಲಾಗಿತ್ತು.