Asianet Suvarna News Asianet Suvarna News

ಕುವೆಂಪು ಮನೆ ಕಂಡು ಪುಳಕಿತರಾದ ಸುಧಾಮೂರ್ತಿ

ಮುಂದಿನ ದಿನಗಳಲ್ಲಿ ಇದೇ ರೀತಿ ಹೂವುಗಳಿಂದ ರಾಜ್ಯದ ಹಲವು ಸ್ಮಾರಕಗಳು ಮೂಡಬೇಕು ಎಂದು ಸಲಹೆ ನೀಡಿದರು. 2ನೇ ಶನಿವಾರ ಬಹುತೇಕ ಕಚೇರಿಗಳಿಗೆ ರಜೆ ಇದ್ದ ಕಾರಣ ಲಾಲ್‌ಬಾಗ್ ಒಟ್ಟು 42 ಸಾವಿರ ಮಂದಿ ಭೇಟಿ ನೀಡಿದ್ದಾರೆ. 37 ಸಾವಿರ ಮಂದಿ ಹಿರಿಯರು ಹಾಗೂ 5 ಸಾವಿರ ಮಕ್ಕಳು ಕೆಂಪುತೋಟದಲ್ಲಿ ಅರಳಿದ ಕುವೆಂಪು ಕಂಡು ಬೆರಗಾದರು.

Sudhamurthy Visit Lalbhag and Watch Kuvempu House

ಬೆಂಗಳೂರು(ಆ.13): ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಪುಷ್ಪಗಳಿಂದ ನಿರ್ಮಿಸಿರುವ ಕುವೆಂಪು ಮನೆಯನ್ನು ಕಂಡು ಪುಳಕಿತರಾಗಿದ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ.ಸುಧಾಮೂರ್ತಿ, ಕುಪ್ಪಳಿಯ ಕುವೆಂಪು ಅವರ ಮೂಲಮನೆಯಷ್ಟೇ ಸೊಗಸಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು.

ಭಾರತೀಯ ಅಂಚೆ ಇಲಾಖೆ ಕುವೆಂಪು ಸ್ಮರಣಾರ್ಥ ಹೊರ ತಂದಿರುವ ಅಂಚೆ ಚೀಟಿಯ ಪ್ರತಿರೂಪವನ್ನು ಲಾಲ್‌ಬಾಗ್‌ನ ಗ್ಲಾಸ್ ಹೌಸ್‌ನಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕುವೆಂಪು ಪ್ರತಿಷ್ಠಾನ ಹಾಗೂ ಲಾಲ್‌ಬಾಗ್ ಸಿಬ್ಬಂದಿ ಅವರ ಅಪಾರಶ್ರಮ ಹಾಗೂ ಆಸಕ್ತಿಯಿಂದ ಫಲಪುಷ್ಪ ಪ್ರದರ್ಶನಕ್ಕೆ ಮತ್ತಷ್ಟು ಕಳೆ ಬಂದಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಹೂವುಗಳಿಂದ ರಾಜ್ಯದ ಹಲವು ಸ್ಮಾರಕಗಳು ಮೂಡಬೇಕು ಎಂದು ಸಲಹೆ ನೀಡಿದರು. 2ನೇ ಶನಿವಾರ ಬಹುತೇಕ ಕಚೇರಿಗಳಿಗೆ ರಜೆ ಇದ್ದ ಕಾರಣ ಲಾಲ್‌ಬಾಗ್ ಒಟ್ಟು 42 ಸಾವಿರ ಮಂದಿ ಭೇಟಿ ನೀಡಿದ್ದಾರೆ. 37 ಸಾವಿರ ಮಂದಿ ಹಿರಿಯರು ಹಾಗೂ 5 ಸಾವಿರ ಮಕ್ಕಳು ಕೆಂಪುತೋಟದಲ್ಲಿ ಅರಳಿದ ಕುವೆಂಪು ಕಂಡು ಬೆರಗಾದರು.

ಒಟ್ಟು 21.8 ಲಕ್ಷ ಹಣ ಸಂಗ್ರವಾಗಿದೆ. ಆ.15ರಂದು ಫಲಪುಷ್ಪ ಪ್ರದರ್ಶನ ಕೊನೆಗೊಳ್ಳಲಿದೆ. ಭಾನುವಾರ ಹಿರಿಯರಿಗೆ 60 ಹಾಗೂ ಮಕ್ಕಳಿಗೆ 20 ಟಿಕೆಟ್ ದರ ನಿಗದಿಪಡಿಸಲಾಗಿದೆ. ಸೋಮವಾರ ಶಾಲಾ ಮಕ್ಕಳಿಗೆ ಪ್ರವೇಶ ಉಚಿತವಿರಲಿದೆ

Sudhamurthy Visit Lalbhag and Watch Kuvempu House

Follow Us:
Download App:
  • android
  • ios