ಈ ವಿಷಯವನ್ನು ಸ್ವತಃ ಸುದೀಪ್‌ ಅವರೇ ಟ್ಟೀಟರ್‌ನಲ್ಲಿ ತಿಳಿಸಿದ್ದಾರೆ. ತಮಗೆ ಆಹ್ವಾನ ಬಂದಿರುವುದಕ್ಕೆ ಸಂತೋಷವಾಗಿರುವುದಾಗಿ ಅವರು ಟ್ಟೀಟರ್‌ನಲ್ಲಿ ಬರೆ ದುಕೊಂಡಿದ್ದಾರೆ. ಈ ಕಾರ್ಪೊರೆಟ್‌ ಕ್ರಿಕೆಟ್‌ ಪಂದ್ಯಾವಳಿ ಯಲ್ಲಿ ಭಾಗವಹಿಸುವಂತೆ ಭಾರತೀಯ ರೊಬ್ಬರಿಗೆ ಆಹ್ವಾನ ಬಂದಿರುವುದು ಇದೇ ಮೊದಲು. ಲಾರ್ಡ್ಸ್ ಕ್ರಿಕೆಟ್‌ ಕ್ಲಬ್‌ನವರು ಸುಮಾರು 2 ವರ್ಷಗಳ ಕಾಲ ಪರಿಶೀಲನೆ ನಡೆಸಿ ಅಂತಿಮವಾಗಿ ಸುದೀಪ್‌ಗೆ ಆಹ್ವಾನ ನೀಡಿದ್ದಾರೆ. ಲಾರ್ಡ್ಸ್ ಕ್ರಿಕೆಟ್‌ನಲ್ಲಿ ಆಡಲು ಅಂತಾ ರಾಷ್ಟ್ರೀಯ ಕ್ರಿಕೆಟಿಗರಿಗೇ ಅವಕಾಶ ಸಿಗುವುದು ವಿರಳ. ಇಂಥ ಸಮಯದಲ್ಲಿ ಸುದೀಪ್‌ ಅವರಿಗೆ ಅವಕಾಶ ಸಿಕ್ಕಿರುವುದು ವಿಶೇಷ.

ಬೆಂಗಳೂರು: ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌(ಸಿಸಿಎಲ್‌)ನಲ್ಲಿ ಭಾಗವಹಿಸಿ ಈಗಾಗಲೇ ಭರ್ಜರಿ ಸುದ್ದಿಯಲ್ಲಿರುವ ನಟ ಕಿಚ್ಚ ಸುದೀಪ್‌ ಅವರು ಇದೀಗ ಲಂಡನ್‌ನಲ್ಲಿ ತಮ್ಮ ಕ್ರಿಕೆಟ್‌ ಚಮತ್ಕಾರವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ. ಲಂಡನ್‌ನ ಪ್ರತಿಷ್ಠಿತ ‘ಲಾರ್ಡ್ಸ್' ಕ್ರಿಕೆಟ್‌ ಟೂರ್ನಮೆಂಟ್‌ನಲ್ಲಿ ಪಾಲ್ಗೊಳ್ಳಲು ಕಿಚ್ಚ ಸುದೀಪ್‌ ಅವರು ಲಂಡನ್‌ಗೆ ತೆರ ಳುತ್ತಿದ್ದಾರೆ. ಪಂದ್ಯಾವಳಿಯಲ್ಲಿ ತಂಡದ ನಾಯಕನಾಗಿ ಸುದೀಪ್‌ ಅವರು ಭಾಗವಹಿಸುತ್ತಿರುವುದು ವಿಶೇಷ.

ಈ ವಿಷಯವನ್ನು ಸ್ವತಃ ಸುದೀಪ್‌ ಅವರೇ ಟ್ಟೀಟರ್‌ನಲ್ಲಿ ತಿಳಿಸಿದ್ದಾರೆ. ತಮಗೆ ಆಹ್ವಾನ ಬಂದಿರುವುದಕ್ಕೆ ಸಂತೋಷವಾಗಿರುವುದಾಗಿ ಅವರು ಟ್ಟೀಟರ್‌ನಲ್ಲಿ ಬರೆ ದುಕೊಂಡಿದ್ದಾರೆ. ಈ ಕಾರ್ಪೊರೆಟ್‌ ಕ್ರಿಕೆಟ್‌ ಪಂದ್ಯಾವಳಿ ಯಲ್ಲಿ ಭಾಗವಹಿಸುವಂತೆ ಭಾರತೀಯ ರೊಬ್ಬರಿಗೆ ಆಹ್ವಾನ ಬಂದಿರುವುದು ಇದೇ ಮೊದಲು. ಲಾರ್ಡ್ಸ್ ಕ್ರಿಕೆಟ್‌ ಕ್ಲಬ್‌ನವರು ಸುಮಾರು 2 ವರ್ಷಗಳ ಕಾಲ ಪರಿಶೀಲನೆ ನಡೆಸಿ ಅಂತಿಮವಾಗಿ ಸುದೀಪ್‌ಗೆ ಆಹ್ವಾನ ನೀಡಿದ್ದಾರೆ. ಲಾರ್ಡ್ಸ್ ಕ್ರಿಕೆಟ್‌ನಲ್ಲಿ ಆಡಲು ಅಂತಾ ರಾಷ್ಟ್ರೀಯ ಕ್ರಿಕೆಟಿಗರಿಗೇ ಅವಕಾಶ ಸಿಗುವುದು ವಿರಳ. ಇಂಥ ಸಮಯದಲ್ಲಿ ಸುದೀಪ್‌ ಅವರಿಗೆ ಅವಕಾಶ ಸಿಕ್ಕಿರುವುದು ವಿಶೇಷ.

ಲಾರ್ಡ್ಸ್ ಕ್ರಿಕೆಟ್‌ ಪಂದ್ಯಾವಳಿಯು ಮೇ 11ರಂದು ಆರಂಭವಾಗಲಿದ್ದು ಸುದೀಪ್‌ ಅವರು ಮೇ 8ರಂದು ಬೆಂಗ ಳೂರಿನಿಂದ ಲಂಡನ್‌ಗೆ ತೆರಳಲಿದ್ದಾರೆ. ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸುತ್ತಿವೆ. ಇದರಲ್ಲಿ ಒಂದು ತಂಡದ ನಾಯಕತ್ವ ವನ್ನು ಸುದೀಪ್‌ ವಹಿಸಿಕೊಂಡಿ ದ್ದಾರೆ. ಸುದೀಪ್‌ ಅವರ ತಂ ಡದಲ್ಲಿ ಐವರು ಭಾರತದ ಆಟಗಾರರು ಆಡಲಿದ್ದಾರೆ. ಕರ್ನಾಟಕ, ಆಂಧ್ರಪ್ರ ದೇಶದಿಂದ ತಲಾ ಇಬ್ಬರು ಮತ್ತು ಕೇರಳದ ಒಬ್ಬ ಕ್ರಿಕೆಟ್‌ ಪಟುವನ್ನು ಸುದೀಪ್‌ ತಮ್ಮ ಜೊತೆ ಕರೆದೊಯ್ಯಲಿ ದ್ದಾರೆ. ಐವರು ಭಾರತೀಯರಷ್ಟೇ ಅಲ್ಲದೆ ಆಸ್ಪ್ರೇಲಿಯಾ ಅಥವಾ ಇಂಗ್ಲೆಂ ಡ್‌ನ ಒಬ್ಬ ಹಾಲಿ ಅಂತಾರಾಷ್ಟ್ರೀಯ ಆಟಗಾರ ಕೂಡ ಸುದೀಪ್‌ ತಂಡದಲ್ಲಿ ಆಡಲಿದ್ದಾರೆ.