ಸೋಮವಾರ ಹೆಬ್ಬುಲಿ ಚಿತ್ರದ ಪ್ರಚಾರ ಯಾತ್ರೆ​ಯಲ್ಲಿ ಪಾಲ್ಗೊಂಡಿದ್ದ ಸುದೀಪ್‌, ಪತ್ರಕರ್ತ​ರೊಂದಿಗೆ ಈ ವಿಚಾರವಾಗಿ ಮಾತಾ​ಡಲು ನಿರಾ​ಕರಿಸಿದರು. ದರ್ಶನ್‌ ಅವರ ಜೊತೆಗಿನ ಸಂಬಂಧದ ಕುರಿತು ತಮಗೆ ಹೇಳುವು​ದಕ್ಕೇನೂ ಇಲ್ಲ. ಒಂದು ಫುಲ್‌ಸ್ಟಾಪ್‌ನಷ್ಟೂಪ್ರತಿ​ಕ್ರಿಯೆ ನೀಡಲ್ಲ. ನಾವು ಇದನ್ನೆಲ್ಲ ಮೀರಿ ಮುಂದು​ವರಿ​​ಯಬೇಕು ಎಂದು ಸುದೀಪ್‌ ಆತ್ಮೀಯರಲ್ಲಿ ಹೇಳಿಕೊಂಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ತುಮಕೂರಿನಲ್ಲೂ ಪತ್ರಕರ್ತರು ಈ ಬಗ್ಗೆ ಪ್ರತಿಕ್ರಿಯೆ ಸುದೀಪ್‌ ಅವರನ್ನು ಕೇಳಿದಾಗ ನೋ ಕಮೆಂಟ್ಸ್‌ ಎಂದರು.

ಬೆಂಗಳೂರು(ಮಾ.07): ನಮ್ಮಿಬ್ಬರ ಸ್ನೇಹ ಮುರಿದು ಬಿದ್ದಿದೆ. ಇನ್ನು ಮೇಲೆ ನಾನು ಮತ್ತು ಸುದೀಪ್‌ ಗೆಳೆಯರಲ್ಲ ಎಂಬ ದರ್ಶನ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಲು ಸುದೀಪ್‌ ನಿರಾಕರಿಸಿ​ದ್ದಾರೆ.

ಸೋಮವಾರ ಹೆಬ್ಬುಲಿ ಚಿತ್ರದ ಪ್ರಚಾರ ಯಾತ್ರೆ​ಯಲ್ಲಿ ಪಾಲ್ಗೊಂಡಿದ್ದ ಸುದೀಪ್‌, ಪತ್ರಕರ್ತ​ರೊಂದಿಗೆ ಈ ವಿಚಾರವಾಗಿ ಮಾತಾ​ಡಲು ನಿರಾ​ಕರಿಸಿದರು. ದರ್ಶನ್‌ ಅವರ ಜೊತೆಗಿನ ಸಂಬಂಧದ ಕುರಿತು ತಮಗೆ ಹೇಳುವು​ದಕ್ಕೇನೂ ಇಲ್ಲ. ಒಂದು ಫುಲ್‌ಸ್ಟಾಪ್‌ನಷ್ಟೂಪ್ರತಿ​ಕ್ರಿಯೆ ನೀಡಲ್ಲ. ನಾವು ಇದನ್ನೆಲ್ಲ ಮೀರಿ ಮುಂದು​ವರಿ​​ಯಬೇಕು ಎಂದು ಸುದೀಪ್‌ ಆತ್ಮೀಯರಲ್ಲಿ ಹೇಳಿಕೊಂಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ತುಮಕೂರಿನಲ್ಲೂ ಪತ್ರಕರ್ತರು ಈ ಬಗ್ಗೆ ಪ್ರತಿಕ್ರಿಯೆ ಸುದೀಪ್‌ ಅವರನ್ನು ಕೇಳಿದಾಗ ನೋ ಕಮೆಂಟ್ಸ್‌ ಎಂದರು.

ಮಧ್ಯೆ ದರ್ಶನ್‌ರ ಮೊದಲ ಚಿತ್ರವಾದ ‘ಮೆಜೆಸ್ಟಿಕ್‌'ನ ನಿರ್ದೇಶಕ ಪಿ.ಎನ್‌.ಸತ್ಯ, ಮೆಜೆ​ಸ್ಟಿಕ್‌ ಚಿತ್ರದ ನಾಯಕನ ಪಾತ್ರಕ್ಕೆ ದರ್ಶನ್‌ ಅಲ್ಲದೇ ಮತ್ಯಾ​ರನ್ನೂ ತಾವು ಸಂಪರ್ಕಿಸಿರಲಿಲ್ಲ. ದರ್ಶನ್‌ ಅವರಿ​ಗಿಂತ ಒಳ್ಳೆಯ ಆಯ್ಕೆ ಬೇರೆ ಯಾರೂ ಇರಲು ಸಾಧ್ಯವಿರಲಿಲ್ಲ. ನಮಗೆ ದರ್ಶನ್‌ ಹೆಸ​ರನ್ನು ಸೂಚಿಸಿದವರು ಛಾಯಾ​ಗ್ರಾಹಕ ಅಣಜಿ ನಾಗ​ರಾಜ್‌ ಎಂದು ಹೇಳಿದ್ದಾರೆ. ಮೆಜೆ​ಸ್ಟಿಕ್‌ ಚಿತ್ರದ ನಿರ್ಮಾಪಕ ರಾಮಮೂರ್ತಿ ಅವರೂ ಸತ್ಯ ಅವರ ಹೇಳಿಕೆಯನ್ನು ಸಮರ್ಥಿಸಿ​ಕೊಂಡಿದ್ದಾರೆ. 
ಆದರೆ ನಿರ್ಮಾಪಕ ಬಾ.ಮ. ಹರೀಶ್‌ ಅವರು ದರ್ಶನ್‌ರನ್ನು ಮೆಜೆಸ್ಟಿಕ್‌ ಸಿನಿಮಾಕ್ಕೆ ಸೂಚಿಸಿದ್ದೇ ಸುದೀಪ್‌. ಈ ಚಿತ್ರಕ್ಕೆ ಹೀರೋ ಆಗುವಂತೆ ಮೊದಲು ಸುದೀಪ್‌ರನ್ನು ಕೇಳಲಾಗಿತ್ತು. ಅವರು ಈ ಪಾತ್ರಕ್ಕೆ ತೂಗುದೀಪ್‌ ಶ್ರೀನಿವಾಸ್‌ ಅವರ ಮಗ ದರ್ಶನ್‌ರನ್ನು ಹಾಕಿಕೊಳ್ಳಿ ಎಂದು ಹೇಳಿದ್ದರು. ಇದಕ್ಕೆ ನಾನೇ ಸಾಕ್ಷಿ ಎಂದು ಹೇಳಿದ್ದಾರೆ.

ನಡುವೆ ಅವರಿಬ್ಬರ ಸ್ನೇಹ ಮತ್ತೆ ಮೊದಲಿನಂತೆ ಮುಂದುವರಿಯಲಿ ಎಂಬ ನಿಟ್ಟಿನಲ್ಲಿ ದರ್ಶನ್‌ ಮತ್ತು ಸುದೀಪ್‌ ಅಭಿ​ಮಾನಿ​ಗಳು ಸಾಮಾಜಿಕ ಜಾಲ​ತಾಣ​ಗಳಲ್ಲಿ ಒತ್ತಾಯ ಆರಂಭಿಸಿದ್ದಾರೆ. ಇಬ್ಬರು ನಟರಿಗೂ ಮತ್ತೆ ಒಂದಾಗುವಂತೆ ಸಂದೇಶ​ಗಳನ್ನು ಹರಿಬಿಟ್ಟಿದ್ದಾರೆ. ಇದರ ಜೊತೆಗೆ ಚಿತ್ರರಂಗದ ಅನೇಕರು ಅವರಿಬ್ಬರ ಸಂಬಂಧವನ್ನು ಸರಿಪಡಿಸು​ವಂತೆ ಹಿರಿಯರ ಬಳಿ ಅಹವಾಲು ಇಟ್ಟಿದ್ದಾರೆ.

ಹಿರಿಯ ನಟ ಜಗ್ಗೇಶ್‌ ಅವರು ಅಭಿಮಾನಿ​ಯೊಬ್ಬರ ಪ್ರಶ್ನೆಗೆ ಉತ್ತರವಾಗಿ, ಇಬ್ಬರೂ ಕನ್ನಡದ ಕಣ್ಮಣಿಗಳು. ಸರಿಹೋಗುತ್ತಾರೆ ಎಂದು ಪ್ರತಿಕ್ರಿಯಿಸಿ​ದ್ದಾರೆ. ನಟ ಆದಿತ್ಯ ಈ ಘಟನೆಯಲ್ಲಿ ದರ್ಶನ್‌ ಹೆಸರು ಹೇಳಿಕೊಂಡು ವೈಯಕ್ತಿಕ ಲಾಭ ಮಾಡಿಕೊಳ್ಳಲು ಹೋಗಬೇಡಿ. ದರ್ಶನ್‌ ಶ್ರಮಕ್ಕೆ ಗೌರವ ಕೊಡಿ ಎಂದು ಟ್ವೀಟಿಸಿದ್ದಾರೆ.

ವರದಿ: ಕನ್ನಡ ಪ್ರಭ