ಮುನ್ನೆಯಷ್ಟೆ ಅಭಿಮಾನಿಗಳಿಗೆ ಪತ್ರ ಬರೆದು ಸುದ್ದಿಯಲ್ಲಿದ್ದ ಸುದೀಪ್ ಈಗ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಅವರು ಬರೆದಿರುವುದು ನಮ್ಮ ಕೆರೆಗಳ ಉಳಿವಿಗಾಗಿ.ಅವರು ಬರೆದಿರುವ ಪತ್ರದ ಸಾರಾಂಶ ಈ ರೀತಿಯಿದೆ ನೋಡಿ
ಗೌರವಾನ್ವಿತ ಮುಖ್ಯಮಂತ್ರಿಗಳು
ಕರ್ನಾಟಕ
ಮಾನ್ಯರೆ,
ನಮ್ಮ ಕೆರೆಗಳೆ ನಮಗೆ ಜೀವನಾಧಾರ. ಪರಿಸರದಿಂದಲೇ ನಮ್ಮೆಲ್ಲರ ಜೀವನ ಹಾಗೂ ಅದರಿಂದಲೇ ಉಸಿರಾಡುತ್ತಿದ್ದೇವೆ. ಪ್ರತಿಯೊಂದು ಮರ,ಗಿಡ,ಪಕ್ಷಿಗಳು, ಪ್ರಾಣಿಗಳು ಹಾಗೂ ಮಾನವರು ಪರಿಸರದಿಂದ ಬದುಕುತ್ತಿದ್ದಾರೆ. ಆದ ಕಾರಣದಿಂದ ಕೆರೆಗಳನ್ನು ನಾಶಪಡಿಸಿದರೆ ನಮ್ಮ ಪ್ರಕೃತಿಯನ್ನು ನಾಶಪಡಿಸಿದಂತೆ.
ಹೃತ್ಪೂರ್ವಕವಾಗಿ ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುವುದೆಂದರೆ, ಸರ್ಕಾರ ಬತ್ತುತ್ತಿರುವ ಕೆರೆಗಳ ಡಿನೋಟಿಫಿಕೇಷನ್ ಬಗ್ಗೆ ಮರುಪರಿಶೀಲಿಸಿ. ಪ್ರಕೃತಿ ತಾಯಿಯ ಕೋಪಕ್ಕೆ ತುತ್ತಾಗುವುದನ್ನು ನಾವು ತಡೆಯೋಣ. ನಾವು ಈಗಾಗಲೇ ಸಾಕಷ್ಟು ಕಳೆದುಕೊಂಡಿದ್ದೇವೆ. ಇರುವ ಕೆರೆಗಳನ್ನು ನಾವು ಉಳಿಸಿಕೊಳ್ಳೋಣ.
ನಾನು ಒಬ್ಬ ನಟನಾಗಿ ಈ ಪತ್ರ ಬರೆಯದೆ. ಒಬ್ಬ ಸಾಮಾನ್ಯ ವ್ಯಕ್ತಿಯ ಪರವಾಗಿ ಪತ್ರ ಬರೆಯುತ್ತಿದ್ದೇನೆ. ಈ ರಾಜ್ಯದೆಡೆಗೆ, ನಗರದೆಡೆಗೆ, ಇಲ್ಲಿ ವಾಸಿಸುವ ಜನರು ಮತ್ತು ಪ್ರಕೃತಿಯ ಮೇಲಿರುವ ಪ್ರೀತಿಯಿಂದ ಈ ಪತ್ರವನ್ನು ಕಳಕಳಿಯಿಂದ ಬರೆದಿದ್ದೇನೆ.
ವಂದನೆಗಳೊಂದಿಗೆ
ಸುದೀಪ್
